Home News Karnataka Gvt : ಸರ್ಕಾರದ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದ್ದೀರಾ? ಹಾಗಿದ್ರೆ ಸಕ್ರಮ ಮಾಡಿಕೊಳ್ಳಲು ಇಲ್ಲಿದೆ...

Karnataka Gvt : ಸರ್ಕಾರದ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದ್ದೀರಾ? ಹಾಗಿದ್ರೆ ಸಕ್ರಮ ಮಾಡಿಕೊಳ್ಳಲು ಇಲ್ಲಿದೆ ನೋಡಿ ಚಾನ್ಸ್

Hindu neighbor gifts plot of land

Hindu neighbour gifts land to Muslim journalist

Karnataka Gvt : ನೀವೇನಾದರೂ ಸರ್ಕಾರದ ನಿಯಮವನ್ನು ಮೀರಿ ಕಟ್ಟಡವನ್ನು ಕಟ್ಟಿದ್ದರೆ ಇದೀಗ ಅದನ್ನು ಸಕ್ರಮ ಮಾಡಿಕೊಳ್ಳಲು ಸುವರ್ಣ ಅವಕಾಶ ಒಂದು ದೊರೆತಿದೆ.

ಹೌದು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಪರವಾನಗಿ ಷರತ್ತು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ. ಆದರೇ ಅದಕ್ಕಾಗಿ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದಂತ ಮಾಲೀಕರು ಶೇ.15ರಷ್ಟು ಮಿತಿಯೊಳಗೆ ನಿಯಮ ಉಲ್ಲಂಘಿಸಿದ್ದರೇ ಮಾತ್ರ ಈ ಆದೇಶವು ಅನ್ವಯ ಆಗಲಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಕ್ಕೆ ಪ್ರತಿ ಚದರ ಮೀಟರ್‌ಗೆ 1 ಸಾವಿರ ರು. ವಾಣಿಜ್ಯ ಕಟ್ಟಡಕ್ಕೆ 1,500 ರು., ಪುರಸಭೆ ವ್ಯಾಪ್ತಿಯಲ್ಲಿ ಕ್ರಮವಾಗಿ 1,200 ರು. ಮತ್ತು 1,800 ರು, ನಗರ ಸಭೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 1,500 ರು. ಮತ್ತು 2,250 ರು., ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 2 ಸಾವಿರ ರು. ಮತ್ತು 3 ಸಾವಿರ ರು. ದಂಡ ನಿಗದಿಗೊಳಿಸಲಾಗಿದೆ.

ಸರ್ಕಾರದ ಈ ಆದೇಶವು ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುವ ಲಕ್ಷಾಂತರ ಮನೆ ಮಾಲೀಕರಿಗೆ ಒಂದು ದೊಡ್ಡ ಪರಿಹಾರ ಒದಗಿಸಲಿದೆ.