Home News Liquor price: ಮತ್ತೆ ಬಿಯರ್ ದರ ಏರಿಕೆಗೆ ಮುಂದಾದ ಕರ್ನಾಟಕ ಸರ್ಕಾರ!

Liquor price: ಮತ್ತೆ ಬಿಯರ್ ದರ ಏರಿಕೆಗೆ ಮುಂದಾದ ಕರ್ನಾಟಕ ಸರ್ಕಾರ!

Online Liquor

Hindu neighbor gifts plot of land

Hindu neighbour gifts land to Muslim journalist

Liquor price: ರಾಜ್ಯ ಸರ್ಕಾರವು ಎಲ್ಲಾ ಬಿಯರ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 10 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಸದ್ಯ ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 205 ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್​​ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್​​ಗೆ 5 ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಾಸವಾಗಿರಲಿದೆ.

ಹಿಂದೆ, ಕರ್ನಾಟಕದಲ್ಲಿ ಬಿಯರ್​​​ಗೆ ಎರಡು ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರಾಂಡ್‌ಗಳಿಗೆ ಲೀಟರ್‌ಗೆ 130 ರೂ. ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇತರ ಬ್ರಾಂಡ್‌ಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗ ರದ್ದುಗೊಳಿಸಲಾಗಿದ್ದು, ಎಲ್ಲಾ ಬಿಯರ್‌ಗಳಿಗೆ ಏಕರೂಪದ ಶೇ 205 ರ ತೆರಿಗೆ ನಿಗದಿಪಡಿಸಲಾಗಿದೆ.