Home News Karnataka Government : ಗ್ಯಾರಂಟಿ ಭಾರ ತಪ್ಪಿಸಲು ಸರ್ಕಾರದಿಂದ ಮಾಸ್ಟರ್ ಪ್ಲಾನ್ – ಇವರೆಲ್ಲಾ ಗ್ಯಾರಂಟಿಯಿಂದ...

Karnataka Government : ಗ್ಯಾರಂಟಿ ಭಾರ ತಪ್ಪಿಸಲು ಸರ್ಕಾರದಿಂದ ಮಾಸ್ಟರ್ ಪ್ಲಾನ್ – ಇವರೆಲ್ಲಾ ಗ್ಯಾರಂಟಿಯಿಂದ ಔಟ್ ಆಗೋದು ಫಿಕ್ಸ್!!

Karnataka Government

Hindu neighbor gifts plot of land

Hindu neighbour gifts land to Muslim journalist

Karnataka Government : ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಆದರೂ ಇದರ ಹೊಡೆತದಿಂದ ಹೊರಬರದ ಸರ್ಕಾರ ಇದೀಗ ಗ್ಯಾರಂಟಿ ಭಾರ ತಗ್ಗಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಇದು ಸಕ್ಸಸ್ ಆದರೆ ಇವರೆಲ್ಲರೂ ಗ್ಯಾರಂಟಿ ಸ್ಕೀಮ್ ನಿಂದ ಹೊರ ಬರೋದು ಫಿಕ್ಸ್ ಆಗಿದೆ.

ಹೌದು, ಮುಂದೆ ಗ್ಯಾರಂಟಿ ಯೋಜನೆಗೆ, ಅಭಿವೃದ್ಧಿ ಕಾರ್ಯಗಳಿಗೆ ಕೊಡಲು ಹಣವೇ ಇಲ್ಲದಂತೆ ಮಾಡಿಕೊಂಡಿರೋ ಸರ್ಕಾರ ಕಂಗೆಟ್ಟಿ ಹೋಗಿದ್ದು ಇದರ ನಿಯಂತ್ರಣಕ್ಕಾಗಿ ರೇಷನ್ ಕಾರ್ಡ್ ಆಪರೇಷನ್ ಗೆ ಮುಂದಾಗಿದೆ. ಹೀಗಾಗಿ ರಾಜ್ಯದ 80% ರಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ದು ಕೂಡಲೇ ಅನರ್ಹರನ್ನು ಪತ್ತೆ ಹಚ್ಚಿ ಎಂದು ರಾಜ್ಯ ಸರ್ಕಾರ (Karnataka Government) ಆದೇಶ ಪ್ರಕಟಿಸಿದೆ.

20 ಲಕ್ಷ BPL ಕಾರ್ಡ್ ರದ್ಧು!!
ಸರ್ಕಾರದ ಆದೇಶದ ಬೆನ್ನಲ್ಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅನರ್ಹ ಫಲಾಭವಿಗಳನ್ನು ಪತ್ತೆ ಹಚ್ಚಲು ತಯಾರಿ ನಡೆಸಿದೆ. ಇದರಲ್ಲಿ ಅನರ್ಹರು ಪತ್ತೆಯಾದರೆ ಅಂದಾಜು 20 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಬಹುದು ಎಂದು ಹೇಳಲಾಗ್ತಿದೆ

ಯಾರ ಕಾರ್ಡ್ ರದ್ದಾಗಬಹುದು?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ಪ್ರತಿ ತಿಂಗಳು 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ, ವೈಟ್ ಬೋರ್ಡ್‌ 4 ಚಕ್ರದ ವಾಹನ ಇದ್ದು ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದಾಗಲಿದೆ.

ಅಲ್ಲದೆ ದೊರೆತ ಮಾಹಿತಿ ಪ್ರಕಾರ ಅನರ್ಹ, ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆ. ಹೀಗಾಗಿ ಈ ಕಾರ್ಯ ಆದಷ್ಟು ಬೇಗ ಮುಗಿದು ಬಿಪಿಎಲ್ ಕಾರ್ಡ್ ಕಡಿಮೆ ಆಗುತ್ತವೆ. ಆಗ ಅವರು ತನ್ನಿಂದ ತಾನೆ ಗ್ಯಾರಂಟಿ ಯೋಜನೆಗಳಿಂದ ಹೊರ ಬರುತ್ತಾರೆ.

Mangaluru: ಬೆಂಗಳೂರಿನಿಂದ ಬಂದಿರುವುದು ಚಡ್ಡಿಗ್ಯಾಂಗ್‌- ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌