Home News Karnataka: ಜಾತಿ ಸಮೀಕ್ಷೆಯ `ಗಣತಿದಾರರಿಗೆ’ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ

Karnataka: ಜಾತಿ ಸಮೀಕ್ಷೆಯ `ಗಣತಿದಾರರಿಗೆ’ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

Karnataka: ರಾಜ್ಯ ಸರ್ಕಾರವು ಜಾತಿ ಗಣತಿ ಸಮೀಕ್ಷೆ ನಡೆಸಿದ್ದ ಗಣತಿದಾರರಿಗೆ ಸಿಹಿಸುದ್ದಿ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಆಧಾರಿತ ಸಮೀಕ್ಷೆಯಲ್ಲಿ ಭಾಗವಹಿಸಿದ ಸಮೀಕ್ಷಾದಾರರು ಹಾಗೂ ಗಣತಿದಾರರಿಗೆ ಗೌರವಧನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಒಟ್ಟು ₹23,87,47,200 ರೂ.,ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಗಣತಿದಾರರಿಗೆ ಸಹಾಯಧನದ ಜತೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷೆದಾರರಿಗೆ ಉಲ್ಲೇಖ-01ರ ಸರ್ಕಾರದ ಆದೇಶದಂತೆ ಎರಡು ಕಂತುಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರೂ.23,87,47,200/-ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಮೊತ್ತವನ್ನು ಐದು ನಗರ ಪಾಲಿಕೆಗಳಿಗೆ ಬಿಡುಗಡೆ ಮಾಡಿ, ಗಣತಿದಾರರಿಗೆ ಗೌರವಧನ ಪಾವತಿಸಲು ಡುವಂತೆ ಉಲ್ಲೇಖ(1) ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆದೇಶ ಹೊರಡಿಸಲಾಗಿರುತ್ತದೆ.

ಅದರಂತೆ ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿದ ಅನುದಾನವನ್ನು ಗಣತಿದಾರರಿಗೆ ಪಾವತಿಸಲು ಐದು ನಗರ ಪಾಲಿಕೆಗಳಿಗೆ ಬಿಡುಗಡೆ ಮಾಡಲು ಉಲ್ಲೇಖ(2) ರಲ್ಲಿ ಮಾನ್ಯ ಮುಖ್ಯ ಆಯುಕ್ತರು, GBA ರವರು ಅನುಮೋದಿಸಿರುತ್ತಾರೆ.ಮೇಲ್ಕಂಡ ಆದೇಶಗಳಂತೆ ಐದು ನಗರ ಪಾಲಿಕೆಗಳಿಗೆ ಸ್ಟೇಟ್ ಬ್ಯಾಂಕ್ ‌ ಆಫ್ ಇಂಡಿಯಾ, ಮಿಷನ್ ರೋಡ್ ಶಾಖೆ, ಖಾತೆ ಸಂಖ್ಯೆ: 44451776129ರಿಂದ ಹಣ ವರ್ಗಾಯಿಸಲಾಗಿರುತ್ತದೆ. ವಿವರ ಈ ಕೆಳಕಂಡಂತಿದೆ.