Home News Karnataka CM: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಮುಖ್ಯಮಂತ್ರಿ ಆಗೋದು ಡಿಕೆಶಿ ಅಲ್ಲ, ಇವರಿಬ್ಬರಲ್ಲಿ...

Karnataka CM: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಮುಖ್ಯಮಂತ್ರಿ ಆಗೋದು ಡಿಕೆಶಿ ಅಲ್ಲ, ಇವರಿಬ್ಬರಲ್ಲಿ ಒಬ್ಬರಂತೆ !!

Hindu neighbor gifts plot of land

Hindu neighbour gifts land to Muslim journalist

Karnataka CM: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ. ಅಚ್ಚರಿ ಎಂಬಂತೆ ಸಿದ್ದರಾಮಯ್ಯ ರಾಜೀನಾಮೆ ನೀಡದರೆ ಡಿ ಕೆ ಶಿವಕುಮಾರ್(DK Shivkumar) ಸಿಎಂ ಆಗಲ್ಲ, ಬದಲಿಗೆ ಕಾಂಗ್ರೆಸ್ ನ ಈ ಇಬ್ಬರು ನಾಯಕರಲ್ಲಿ ಒಬ್ಬರು ಆಗುತ್ತಾರಂತೆ !!

ಸಿಎಂ ಸಿದ್ದರಾಮಯ್ಯ(CM Siddaramaiah) ಅವರಿಗೆ ಮುಡಾ ಪ್ರಕರಣದಲ್ಲಿ (MUDA Case) ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ (Karnataka High Court) ಎತ್ತಿಹಿಡಿದಿದೆ. ಈ ಬೆನ್ನಲ್ಲೇ ಬಿಜೆಪಿಯು, ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕೆಂದು ಆದೇಶಿಸಿದೆ. ಹಾಗಿದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ? ಸಿಎಂ ಪಟ್ಟ ಡಿಕೆಶಿಗೋ ಇಲ್ಲ ಬೇರೆಯವರಿಗೋ? ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಅಚ್ಚರಿ ಎಂಬಂತೆ ಇಬ್ಬರು ನಾಯಕರ ಹೆಸರು ಮುನ್ನಲೆಗೆ ಬಂದಿದೆ.

ಕಾಂಗ್ರೆಸ್‌ ಸರ್ಕಾರ ರಚನೆಯಾದಗಿನಿಂದಲೂ ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಈ ಹಿಂದೆಯೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಹೈಕಮಾಂಡ್‌ ನಾಯಕ ಜೊತೆಗೂ ಹಲವು ಬಾರೀ ಚರ್ಚೆ ನಡೆಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ರೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಮುಂಚೂಣಿಯಲ್ಲಿರಲಿದ್ದಾರೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಅದೇನೆಂದರೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿನ ಸಿಎಂ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನ ಕೇಳಿದ್ರೆ, ಡಿ ಕೆ ಶಿವಕುಮಾರ್‌ ಹೆಸರನ್ನು ಸಿದ್ದರಾಮಯ್ಯ ಸೂಚಿಸುವುದು ಅನುಮಾನವಾಗಿದೆ.

ಅಂದಹಾಗೆ ಒಂದು ವೇಳೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾದರೇ ಸಿದ್ದರಾಮಯ್ಯ ಅವರು ಸೂಚಿಸಿದವರಿಗೆ ಹೈಕಮಾಂಡ್‌ ಮಣೆ ಹಾಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಪ್ತರಾದ ಎಂ ಬಿ ಪಾಟೀಲ್‌ ಅಥವಾ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರು ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.