Home News Karnataka BJP: ರಾಜ್ಯ ಬಿಜೆಪಿಗೆ ಹೊಸ ಉಸ್ತುವಾರಿ ನೇಮಿಸಿದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

Karnataka BJP: ರಾಜ್ಯ ಬಿಜೆಪಿಗೆ ಹೊಸ ಉಸ್ತುವಾರಿ ನೇಮಿಸಿದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ !!

Karnataka BJP

Hindu neighbor gifts plot of land

Hindu neighbour gifts land to Muslim journalist

Karnataka BJP: ರಾಜ್ಯದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕನ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಹೈಕಮಾಂಡ್ ಕರ್ನಾಟಕ ರಾಜ್ಯ ಬಿಜೆಪಿಯ(Karanataka BJP) ಉಸ್ತುವಾರಿಯನ್ನು ಬದಲಾವಣೆ ಮಾಡಿ ಹೊಸ ಸ್ತುವಾರಿಯನ್ನು ನೇಮಿಸಿದೆ.

ಹೌದು, ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದೆ. ರಾಧಾಮೋಹನ್ ದಾಸ್ ಅಗರ್ವಾಲ್(Ramamohan Das agarval) ಅವರನ್ನ ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ಇನ್ನು ಸುಧಾಕರ್ ರೆಡ್ಡಿ(Sudhakar Reddy) ಅವರನ್ನು ಸಹ ಉಸ್ತುವಾರಿಯನ್ನಾಗಿ ಬಿಜೆಪಿ ಹೈಕಮಾಂಡ್ ನೇಮಿಸಿಸಲಾಗಿದೆ. ಈ ಮೂಲಕ ಈ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್​ ಸಿಂಗ್‌ ಗೆ ಕೊಕ್ ನೀಡಲಾಗಿದೆ.

ಅಂದಹಾಗೆ ಡಾ.ರಾಧಾಮೋಹನ್‍ದಾಸ್ ಅವರು ಲೋಕಸಭಾ ಚುನಾವಣಾ ವೇಳೆ ಕರ್ನಾಟಕದ ಉಸ್ತುವಾರಿಯಾಗಿ ಕೂಡ ನೇಮಕವಾಗಿದ್ದರು. ಆ ಸಂದರ್ಭದಲ್ಲಿ ಅವರು ರಾಜ್ಯದ ನಾಯಕರೊಂದಿಗೆ ಕೆಲಸ ಮಾಡಿದ್ದು, ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಮರ್ಥವಾಗಿ ಮಾರ್ಗದರ್ಶನ ನೀಡಿದ್ದರು.

ಇನ್ನು ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಸಂಸದ ಡಾ.ರಾಧಾಮೋಹನ್‍ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ವಾಗತಿಸಿದ್ದು, ಇಬ್ಬರನ್ನೂ ಅಭಿನಂದಿಸಿದ್ದಾರೆ.

Heart Attack: ಚೆಸ್‌ ಆಡುತ್ತಿರುವಾಗಲೇ ಕುಸಿದು ಸಾವಿಗೀಡಾದ ಗ್ರ್ಯಾಂಡ್‌ ಮಾಸ್ಟರ್‌