Home News ಕಾರ್ಕಳ:ಮಹಿಳೆಯ ಮೇಲೆ ಹಲ್ಲೆ ನಡೆಸಿದ ಅನ್ಯಮತೀಯ!!ವಿನಃ ಕಾರಣ ಪ್ರಶ್ನಿಸಿ ಕತ್ತಿ ಹಿಡಿದು ಕಡಿಯಲು ಮುಂದಾದ ಹುಸೇನ್

ಕಾರ್ಕಳ:ಮಹಿಳೆಯ ಮೇಲೆ ಹಲ್ಲೆ ನಡೆಸಿದ ಅನ್ಯಮತೀಯ!!
ವಿನಃ ಕಾರಣ ಪ್ರಶ್ನಿಸಿ ಕತ್ತಿ ಹಿಡಿದು ಕಡಿಯಲು ಮುಂದಾದ ಹುಸೇನ್

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ: ಅನ್ಯಕೋಮಿನ ವ್ಯಕ್ತಿಯೊಬ್ಬ ಮನೆಯಂಗಳಕ್ಕೆ ಬಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪಿಲಿಚಂಡಿಸ್ಥಾನದ ಬಳಿ ನಡೆದಿದ್ದು,ಘಟನೆಯಿಂದ ಮಹಿಳೆಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅನ್ಯಮತೀಯ ಹುಸೇನ್ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಅ.27 ರಂದು ರಾತ್ರಿ ಕುಕ್ಕುಂದೂರು ಗ್ರಾಮದ ಪಿಲಿಚಂಡಿಸ್ಥಾನದ ಬಳಿಯ ನಿವಾಸಿಯಾದ ಜ್ಯೋತಿ ಎಂಬುವವರು ತನ್ನ ತಾಯಿ ನಲ್ಲಮ್ಮರೊಂದಿಗೆ ತಮ್ಮ ಮನೆಯ ಪಕ್ಕದಲ್ಲಿರುವ ಗಂಡನ ಅಣ್ಣನ ಹೆಂಡತಿ ದುರ್ಗಾ ಎಂಬುವವರ ಮನೆಯಲ್ಲಿ ಟಿ ವಿ ನೋಡುತ್ತಿರುವ ಸಂದರ್ಭ ಅನ್ಯಮತೀಯ ಹುಸೇನ್ ಎಂಬಾತ ತನ್ನ ಮನೆಯಲ್ಲಿ ನಿಂತುಕೊಂಡು ದುರ್ಗಾಳನ್ನು ಉದ್ದೇಶಿಸಿ ‘ಫ್ಯಾಕ್ಟರಿಗೆ ಹೋಗಿ ತಡವಾಗಿ ಬರುತ್ತೀಯ’ ಎಂದು ವಿನಃ ಕಾರಣ ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಆಗ ದುರ್ಗಾಳು ಹೊರಗೆ ಬಂದು ‘ನಿನಗೆ ನನ್ನ ವಿಚಾರ ಯಾಕೆ’ ಎಂದು ಕೇಳಿದಾಗ ಕೋಪಗೊಂಡ ಹುಸೇನ್ ಕತ್ತಿಯನ್ನು ಹಿಡಿದುಕೊಂಡು ದುರ್ಗಾಳ ಮನೆಯ ಅಂಗಳಕ್ಕೆ ಬಂದು ಕತ್ತಿಯಿಂದ ದುರ್ಗಾಳಿಗೆ ಕಡಿಯಲು ಮುಂದಾಗಿದ್ದಾನೆ. ಈ ವೇಳೆ ಇನ್ನೊರ್ವ ಮಹಿಳೆ ಜ್ಯೋತಿ ಎಂಬವರು ತಡೆಯಲು ಮುಂದಾಗಿದ್ದು ಅವರ ಬಲಕೈಗೆ ಗಾಯವಾಗಿದೆ. ಹುಸೇನ್ ಪುನಃ ದುರ್ಗಾಳಿಗೆ ಕತ್ತಿಯಿಂದ ಹೊಡೆದು ತಲೆಗೆ ಗಾಯಗೊಳಿಸಿದ್ದಲ್ಲದೇ, ತಾಯಿ ನಲ್ಲಮ್ಮರವರ ಕಾಲಿಗೆ ಕಲ್ಲನ್ನು ಎಸೆದು ಗಾಯಗೊಳಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೇ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಹಿಂದೂ ಜಾಗರಣ ವೇದಿಕೆಯ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಮನೆಯವರಿಗೆ ಧೈರ್ಯತುಂಬಿದ್ದಾರೆ.ವಿನಃ ಕಾರಣ ಹಲ್ಲೆಗೆ ಮುಂದಾದ ಅನ್ಯಮತೀಯನ ಬಂಧನಕ್ಕೆ ಬಲೆ ಬೀಸಲಾಗಿದ್ದು, ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ.