Home Breaking Entertainment News Kannada Oscar : ಆಸ್ಕರ್‌ ರೇಸಿನಲ್ಲಿ ಕನ್ನಡದ ಎರಡು ಸಿನಿಮಾ | ಕಾಂತಾರ ಮತ್ತು ವಿಕ್ರಾಂತ್‌ ರೋಣ,...

Oscar : ಆಸ್ಕರ್‌ ರೇಸಿನಲ್ಲಿ ಕನ್ನಡದ ಎರಡು ಸಿನಿಮಾ | ಕಾಂತಾರ ಮತ್ತು ವಿಕ್ರಾಂತ್‌ ರೋಣ, ಗೆಲುವು ಯಾರಿಗೆ ?

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು. ಇದೀಗ ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೌದು ಆರ್‌ಆರ್‌ಆರ್‌ ನಂತರ ಇದೀಗ ಆಸ್ಕರ್‌ ಅಂಗಳಕ್ಕೆ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಮತ್ತು ಅನೂಪ್ ಭಂಡಾರಿ ನಿರ್ದೇಶನ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಪಾದಾರ್ಪಣೆ ಮಾಡಿದೆ. ಆದರೆ ಯಾರ ಪಾಲಿಗೆ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಲಭಿಸುತ್ತೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ಪ್ರಸ್ತುತ ವಿಕ್ರಾಂತ್‌ ರೋಣ ಮತ್ತು ಕಾಂತಾರ ಆಸ್ಕರ್‌ ಅರ್ಹತೆ ವಿಭಾಗದಲ್ಲಿ ಆಯ್ಕೆಯಾಗಿವೆ. ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ನೆರಳಿನಲ್ಲಿದೆ .

ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಆಯ್ಕೆ ಆಗಿದೆ . ಈಗಾಗಲೇ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದ ಅರ್ಹತಾ ಸುತ್ತನ್ನು ಪಾಸ್‌ ಮಾಡಿದೆ. ಆದ್ರೆ, ಸಿನಿಮಾ ಮುಂದಿನ ಹಂತಕ್ಕೆ ಹೋಗಬೇಕು ಅಂದ್ರೆ ಆಸ್ಕರ್‌ ಸದಸ್ಯರು ಮತ ಚಲಾಯಿಸಬೇಕು. ಒಂದು ವೇಳೆ ಬಹುಮತಗಳು ಬಂದ್ರೆ ಕಾಂತಾರ ಮುಂದಿನ ವಿಭಾಗಕ್ಕೆ ಹೋಗುತ್ತದೆ.

ಈಗಾಗಲೇ ‘ಹೊಂಬಾಳೆ ಫಿಲ್ಮ್ಸ್​​’ ​ ಅಡಿ ಮೂಡಿಬಂದಿರುವ ‘ಕಾಂತಾರ’ದಲ್ಲಿ ತುಳುನಾಡಿನ ಸಂಸ್ಕೃತಿ ಕಂಬಳ, ಭೂತಕೋಲ, ದೈವಾರಾಧನೆ ಬಗ್ಗೆ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ರಿಷಬ್​ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಸೇರಿದಂತೆ ಹಲವಾರು ನಟ-ನಟಿಯರು ಅಭಿನಯಿಸಿದ್ದಾರೆ.

ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಕೇವಲ 18 ಕೋಟಿ ರೂ.ನಲ್ಲಿ ನಿರ್ಮಾಣವಾದ ಸಿನಿಮಾ. ಈ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಬಾಕ್ಸ್ ಆಫೀಸ್‍ನಲ್ಲಿ ಕಾಂತಾರ ಬರೋಬ್ಬರಿ 400 ಕೋಟಿ ರೂ.ಗೂ ಹೆಚ್ಚಿ ಗಳಿಕೆ ಮಾಡಿದೆ. ಅಲ್ಲದೆ, ರಿಷಬ್‌ ನಟನೆಗೆ ಭಾರತೀಯ ಚಿತ್ರರಂಗದ ದಿಗ್ಗಜರು ಸಹ ಮೆಚ್ಚುಗೆ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ.

ಅದಲ್ಲದೆ ವಿಕ್ರಾಂತ್‌ ರೋಣ ನಿರ್ದೇಶಕ ಅನೂಪ್ ಅವರ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆ ಆಧಾರಿತ ಚಿತ್ರ. ಕರಾವಳಿ ಸೊಗಡಿನ ನಡುವೆ ಮರ್ಡರ್ ಮಿಸ್ಟರಿಯನ್ನು ಭೇದಿಸಲು ಬರುವ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ರೋಣ ನಿಗೂಢ ಕೊಲೆಯ ಸುತ್ತ ತನ್ನದೆ ಸ್ಟೈಲ್‌ನಲ್ಲಿ ಪ್ರಕರಣ ಭೇದಿಸುವ ರೋಚಕತೆ ಹಾಗೂ ಕೊಲೆಗಾರ ಯಾರು ಎನ್ನುವ ಸಸ್ಪೆನ್ಸ್ ಮದ್ಯ ಚಿತ್ರ ಸಾಗುತ್ತದೆ.

ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾ ಕ್ಕೆ ಆಸ್ಕರ್ ಪಟ್ಟ ಸಿಗಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಪ್ರಶಸ್ತಿ ದೊರೆತರು ಕನ್ನಡಿಗರು ಹೆಚ್ಚಿನ ಖುಷಿ ಪಡುತ್ತಾರೆ.