Home News Shivrajkumar : ಕನ್ನಡದ ಕುರಿತು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ – ಕೊನೆಗೂ ಮೌನ...

Shivrajkumar : ಕನ್ನಡದ ಕುರಿತು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ – ಕೊನೆಗೂ ಮೌನ ಮುರಿದ ಶಿವಣ್ಣ, ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Shivrajkumar: ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆನ್ನಲ್ಲೇ ಕರ್ನಾಟಕದದ್ಯಂತ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಮಾತ್ರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಈ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಅವರು ಕೂಡ ಕಮಲ್ ಹಾಸನ್ ಹೇಳಿಕೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಖಾಸಗಿ ವಾಹಿನಿಯ ಸಮಾರಂಭವೊಂದರಲ್ಲಿ ಮಾತನಾಡಿರುವ ಶಿವಣ್ಣ, ಮೊದಲ ಬಾರಿಗೆ ಕಮಲ್​ ಹಾಸನ್​ ಕನ್ನಡ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ಕಮಲ್​ ಹಾಸನ್​ ಅವರು ಕನ್ನಡವನ್ನು ತುಂಬಾ ಪ್ರೀತಿ ಮಾಡುತ್ತಾರೆ. ನಮ್ಮ ತಂದೆಯವರ ಬಗ್ಗೆ ಅಷ್ಟೇ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಕನ್ನಡ ಮಾತನಾಡಿದ್ದಾರೆ. ಬೆಂಗಳೂರು ಬಗ್ಗೆಯೂ ಗೌರವದಿಂದ ಮಾತನಾಡಿದ್ದಾರೆ. ನಾವು ಅವರನ್ನು ನೋಡಿ ಬೆಳೆದವರು. ನಾನು ಕೂಡ ಅವರ ಬಹುದೊಡ್ಡ ಅಭಿಮಾನಿ. ನನಗೆ ಅವರೇ ಸ್ಫೂರ್ತಿ. ನನ್ನ ನೆಚ್ಚಿನ ನಟ ಕೂಡ ಅವರೇ. ಪ್ರಸ್ತುತ ಬೆಳವಣಿಗೆ ಖಂಡಿತ ಅವರಿಗೆ ಅರ್ಥವಾಗಿರುತ್ತದೆ. ಅವರು ಏನು ಮಾಡಬೇಕು ಅದನ್ನು ಖಂಡಿತ ಮಾಡೇ ಮಾಡುತ್ತಾರೆ ಅನ್ನೋ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ನಿನ್ನೆ ಬಂದಾಗ ಅವರು ಬೆಂಗಳೂರಿನಲ್ಲೇ ಇದ್ದರು. ಆಗಲೇ ಕೇಳಬಹುದಿತ್ತು. ಆದರೆ, ಏಕೆ ಕೇಳಲಿಲ್ಲ ಅನ್ನೋದು ನನಗೂ ಕೂಡ ಗೊತ್ತಿಲ್ಲ. ಕನ್ನಡ ಪ್ರೀತಿ ಅನ್ನೋದು ಯಾರೋ ಒಬ್ಬರು ಮಾತನಾಡಿದಾಗ ಬರಬಾರದು. ಸದಾ ಕನ್ನಡ ಇರಬೇಕು. ಏನೋ ಒಂದು ವಿವಾದ ಆದಾಗ ಮಾತ್ರ ಧ್ವನಿ ಎತ್ತುವುದಲ್ಲ, ಯಾವಾಗಲೂ ಕನ್ನಡವನ್ನು ಬೆಳೆಸಬೇಕು. ನಾವು ಕನ್ನಡಕ್ಕೋಸ್ಕರ ಹೋರಾಡುತ್ತೇವೆ ಮತ್ತು ಸಾಯುವುದಕ್ಕೂ ರೆಡಿ ಇದ್ದೇವೆ. ಬರೀ ಮಾತಲ್ಲಿ ಮಾತನಾಡಿ, ಮಾಧ್ಯಮದ ಮುಂದೆ ದೊಡ್ಡದಾಗಿ ಪೋಸ್​ ಕೊಡುವುದು ದೊಡ್ಡ ವಿಷಯವಲ್ಲ. ಕನ್ನಡಕ್ಕೆ ನಾವೇನು ಮಾಡುತ್ತಿದ್ದೇವೆ ಅನ್ನೋದನ್ನ ನೀವೇ ಹುಡುಕಿ ನೋಡಿ, ನಿಮಗೇ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.