Home latest ಅತ್ತ ಕಡೆ ರೋಚಕ ಕಬಡ್ಡಿ ಫೈನಲ್ | ಇತ್ತ ಕಡೆ ಕಟ್ಟಿಗೆ ಹಿಡಿದು ಬಡಿದಾಟ

ಅತ್ತ ಕಡೆ ರೋಚಕ ಕಬಡ್ಡಿ ಫೈನಲ್ | ಇತ್ತ ಕಡೆ ಕಟ್ಟಿಗೆ ಹಿಡಿದು ಬಡಿದಾಟ

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರ ಗುಂಪು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಕ್ರೀಡಾ ಶಾಲೆಯ ಆವರಣದಲ್ಲಿ ವಲಯಮಟ್ಟದ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದ ಸಂದರ್ಭದಲ್ಲಿ ಕಬಡ್ಡಿ ಆಟ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರು ಬಡಿದಾಡಿಕೊಂಡಿದ್ದಾರೆ. ಅದು ಕೂಡಾ ಕಟ್ಟಿಗೆ ತುಂಡಲ್ಲಿ. ಹೌದು, ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಜಗಳ ತಾರಕಕ್ಕೇರಿ ಜಗಳವಾಗಿದೆ. ಈ ಗಲಾಟೆಯಲ್ಲಿ ಕೈಗೆ ಸಿಕ್ಕ ಕಟ್ಟಿಗೆಗಳಿಂದ ಯುವಕರು ಬಡಿದಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ನಡೆದಿದೆ.

ಚಂದರಗಿ ಹಾಗೂ ಕಟಕೋಳ ಶಾಲೆಯ ವಿದ್ಯಾರ್ಥಿಗಳ ತಂಡಗಳ ಮಧ್ಯೆ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೈಗೆ ಸಿಕ್ಕ ಬಡಿಗೆ ಹಿಡಿದು ಯುವಕರು ಬಡಿದಾಡಿಕೊಂಡಿದ್ದಾರೆ.

ಎರಡು ಗ್ರಾಮಗಳ ಯುವಕರ ಬಡಿದಾಟ ನೋಡಿದ ಸ್ಥಳೀಯರು, ಶಾಲಾ ವಿದ್ಯಾರ್ಥಿಗಳು ಎದ್ದು ಬಿದ್ದು ಓಡಿಹೋಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.