Home News Jeevana Sangama: ಇನ್ನೂ ಮದುವೆಯಾಗದ ಹುಡುಗರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ !!

Jeevana Sangama: ಇನ್ನೂ ಮದುವೆಯಾಗದ ಹುಡುಗರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ !!

Jeevana Sangama

Hindu neighbor gifts plot of land

Hindu neighbour gifts land to Muslim journalist

Jeevana Sangama: ಅಯ್ಯೋ ವಯಸ್ಸಾಯ್ತು, ಇನ್ನೂ ಮದುವೆ ಆಗ್ಲಿಲ್ಲ ಎಂದು ಕೊರಗುತ್ತಾ ಸಂಕಟಪಡುತ್ತಿರುವ ಅವಿವಾಹಿತ ಯುವಕರಿಗೆ(Un married)ರಾಜ್ಯ ಸರ್ಕಾರವು(State Government) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಇದರಿಂದ ಅವರು ಮುಂದೆ ಅವರು ಹುಡುಗಿ ಸಿಗುತ್ತಿಲ್ಲ ಎಂದು ಸಂಕಟ ಪಡುವ ಅಗತ್ಯವಿಲ್ಲ.

KSRTC: ಕೆಎಸ್​ಆರ್​ಟಿಸಿ ಯಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗುಡ್ ನ್ಯೂಸ್!

ಹೌದು, ರಾಜ್ಯದ ಅವಿವಾಹಿತ ಯುವಕರ ಇನ್ಮುಂದೆ ಹುಡುಗಿ ಸಿಕ್ಕುತ್ತಿಲ್ಲ ಎಂದು ಸಂಕಟಪಡುವ, ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ರಾಜ್ಯ ಸರ್ಕಾರ ಅದಕ್ಕಾಗಿ ಪೋರ್ಟಲ್‌ ಒಂದನ್ನು ತೆರೆದಿದೆ. ಇದಕ್ಕೆ ‘ಜೀವನ ಸಂಗಮ'(Jeevana Sangama) ಎಂದು ಹೆಸರನ್ನು ಕೂಡ ನೀಡಿದೆ. ಇನ್ನು ಈ ಮೂಲಕ ಅವಿವಾಹಿತ ಯುವಕರಿಗೆ ವಿವಾಹ ಭಾಗ್ಯ ಕೂಡಿ ಬರಲಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಏನಿದು ‘ಜೀವನ ಸಂಗಮ’?
‘ಜೀವನ ಸಂಗಮʼ ಎಂಬ ಪೋರ್ಟಲ್‌ ಅನ್ನು ಉತ್ತರ ಕನ್ನಡ(Uttara Kannada) ಜಿಲ್ಲಾಡಳಿತ ಆರಂಭಿಸಿದ್ದು, ವಿನೂತನ ಪ್ರಯೋಗ ಕೈಗೊಂಡಿದೆ. ಜಿಲ್ಲೆಯಲ್ಲಿನ ಅವಿವಾಹಿತ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆರಿಸಲು ಹಾಗೂ ಹೆಚ್‌ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧವನ್ನು ಬೆಸೆದು ಅವರು ವಿವಾಹವಾಗಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.ಇದರ ಮೂಲಕ ಹಲವರ ಬಾಳು ಬೆಳಗುವುದು ಖಂಡಿತಾ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು ಈ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಎಲ್ಲಾ ಡೇಟಾವನ್ನು ಗೌಪ್ಯವಾಗಿ ಇರಿಸಿ, ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ ಯುವತಿಯರಿಗೆ ಮಾತ್ರ ಈ ವಿವಾಹ ನೋಂದಣಿ ವೇದಿಕೆ ಒದಗಿಸಲಿದ್ದು, ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಇದರ ನೆರವು ದೊರೆಯಲಿದೆ ಎಂದು ತಿಳಿಸಿದೆ.

Chanakya Neeti: ಹೆಂಡತಿಯು ದಿನಕ್ಕೆರಡು ಸಲ ಗಂಡನ ಆ ಭಾಗವನ್ನು ಮುಟ್ಟಬೇಕಂತೆ – ಪ್ರೀತಿಯೂಂದಿಗೆ ಸುಖವೂ ಹೆಚ್ಚುತ್ತಂತೆ !!