Home News ಮದವೇರಿದ ಆನೆ ಹಾಗೂ ಜೆಸಿಬಿಯ ನಡುವೆ ಭಯಂಕರ ಕಾದಾಟ !! | ಆನೆಯ ತಳ್ಳಾಟಕ್ಕೆ ಜೆಸಿಬಿ...


ಮದವೇರಿದ ಆನೆ ಹಾಗೂ ಜೆಸಿಬಿಯ ನಡುವೆ ಭಯಂಕರ ಕಾದಾಟ !! | ಆನೆಯ ತಳ್ಳಾಟಕ್ಕೆ ಜೆಸಿಬಿ ವಾಹನವೇ ಹಿಂದೆ ಸರಿದ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಆನೆ ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲೊಂದು. ದೈತ್ಯವಾಗಿ ಕಂಡರೂ ಮೃದು ಮನಸ್ಸಿನ ಪ್ರಾಣಿ ಎಂದೇ ಹೇಳಬಹುದು. ಆದರೆ ಕೆಲವೊಮ್ಮೆ ಅವುಗಳು ಮದವೇರಿ ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹುದೇ ಒಂದು ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ ಕಾದಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ತೆರೆದ ಮೈದಾನದಲ್ಲಿ ಭಾರೀ ಪ್ರಮಾಣದ ಜೆಸಿಬಿ ವಾಹನ ಮತ್ತು ಕಾಡಾನೆಯನ್ನು ಕಾಣಬಹುವುದಾಗಿದೆ. ಸ್ಕೂಪರ್‌ನಲ್ಲಿ ಚೂಪಾದ ಹಲ್ಲುಗಳನ್ನು ಹೊಂದಿರುವ ಜೆಸಿಬಿ ಯಂತ್ರವು ಆನೆಯನ್ನು ಪುನಃ ತನ್ನ ವಾಸಸ್ಥಾನಕ್ಕೆ ಹೋಗುವಂತೆ ತಳ್ಳುವುದನ್ನು ನೋಡಬಹುದು.

ಆನೆ ಕೂಡ ತನ್ನೆಲ್ಲ ಶಕ್ತಿಯಿಂದ ಸ್ಕೂಪರ್‌ಗೆ ಮುಖ ಹಾಕಿ ಯಂತ್ರವನ್ನು ತಳ್ಳಿತು. ಇದರಿಂದ ಜೆಸಿಬಿ ಸ್ವಲ್ಪ ಹಿಂದೆ ಹೋಗಿದೆ. ಜೆಸಿಬಿ ವಾಹನದಿಂದ ತಳ್ಳುವುದರಿಂದ ಆನೆಗೆ ಅಪಾಯಕಾರಿಯಾಗುವುದು ಎಂದು ತಿಳಿದ ಜೆಸಿಬಿ ಚಾಲಕ ಸುಮ್ಮನಾಗುತ್ತಾನೆ. ಆದರೆ ಆನೆ ಮಾತ್ರ ಗಂಭೀರವಾಗಿ ಗಾಯಗೊಂಡರೂ ಸಹ ಕಾದಾಡುವುದರಿಂದ ಹಿಂದೆ ಸರಿಯಲಿಲ್ಲ. ಈ ಜೆಸಿಬಿ ಮತ್ತು ಆನೆಯ ಕಾದಾಟದ ಹಿಂದಿರುವ ಕಾರಣ ಅಸ್ಪಷ್ಟವಾಗಿದ್ದರೂ, ತಮ್ಮ ತಮ್ಮ ರಕ್ಷಣೆಗಾಗಿ ಕಾದಾಡುತ್ತಿರುವುದು ತಿಳಿದು ಬರುತ್ತದೆ.

https://www.instagram.com/reel/CZirpQrKVbp/?utm_source=ig_web_copy_link

ಇನ್ನೂ ಈ ವೀಡಿಯೋವನ್ನು ವೈಲ್ಡ್ ಅನಿಮಲ್ ಕ್ರೀಯೆಶನ್ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಿನ್ನೆ ಅಪ್‌ಲೋಡ್ ಮಾಡಲಾದ ಈ ವೀಡಿಯೋ ಇದುವರೆಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ.  ವೀಡಿಯೋ ನೋಡಿದ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಆನೆಯನ್ನು ನಾವು ದೂಷಿಸುವುದಿಲ್ಲ, ಆದರೆ ಜೆಸಿಬಿ ಚಾಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.