Home News Janardhan Reddy: ಅಕ್ರಮ ಗಣಿ ಕೇಸಲ್ಲಿ ಜೈಲು; ಶಾಸಕತ್ವದಿಂದ ರೆಡ್ಡಿ ಅನರ್ಹ-ಆದೇಶ

Janardhan Reddy: ಅಕ್ರಮ ಗಣಿ ಕೇಸಲ್ಲಿ ಜೈಲು; ಶಾಸಕತ್ವದಿಂದ ರೆಡ್ಡಿ ಅನರ್ಹ-ಆದೇಶ

Janardhan Reddy

Hindu neighbor gifts plot of land

Hindu neighbour gifts land to Muslim journalist

Janardhan Reddy: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರಿಗೆ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ವಿಧಾನಸಭೆ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ. ಜನಾರ್ದನರೆಡ್ಡಿ ಅವರ ವಿರುದ್ದದ ಶಿಕ್ಷೆ ತೀರ್ಪಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ದೊರೆಯದಿದ್ದರೆ ವಿಧಾನಸಭೆ ಸದಸ್ಯ ಸ್ಥಾನದ ಅನರ್ಹತೆ ಮುಂದುವರಿಯಲಿದೆ.

ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಆರು ವರ್ಷಗಳವರೆಗೆ ಮತ್ತೆ ಸದಸ್ಯರಾಗಲು ಅವಕಾಶವಿಲ್ಲ ಎಂದು ವಿಧಾನಸಭೆ ಕಾರೈದರ್ಶಿ ಎಂ. ವಿಶಾಲಾಕ್ಷಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದರೆ, ಶಾಸಕ ಸ್ಥಾನದಲ್ಲಿ ರೆಡ್ಡಿ ಮುಂದುವರಿಯಲಿದ್ದಾರೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿಯ(ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷ ಶಿಕ್ಷೆ ವಿಧಿಸಿದೆ. ಹೀಗಾಗಿ ಸಂವಿಧಾನದ 191(1) (ಇ) ಸೆಕ್ಷನ್ ಹಾಗೂ ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾದರೆ ತನ್ನಿಂದ ತಾನೆ ಶಾಸಕತ್ವ ರದ್ದಾಗಲಿದೆ. ಹೀಗಾಗಿ ಶಾಸಕ ಸ್ಥಾನ ರದ್ದಾಗಿದೆ.