Home News Terror Attack : ಭಾರತಕ್ಕೆ ಬಂದಿಳಿದ ಇಸ್ರೇಲ್, ಅಮೆರಿಕ ಯುದ್ಧ ವಿಮಾನ – ಏನಿದರ ಹಿಂದಿನ...

Terror Attack : ಭಾರತಕ್ಕೆ ಬಂದಿಳಿದ ಇಸ್ರೇಲ್, ಅಮೆರಿಕ ಯುದ್ಧ ವಿಮಾನ – ಏನಿದರ ಹಿಂದಿನ ಲೆಕ್ಕಾಚಾರ?

Hindu neighbor gifts plot of land

Hindu neighbour gifts land to Muslim journalist

Terror Attack : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ. ಇದರ ನಡುವೆಯೇ ಅಮೆರಿಕಾ ಮತ್ತು ಇಸ್ರೇಲ್ ಯುದ್ಧ ವಿಮನಗಳು ಭಾರತಕ್ಕೆ ಬಂದು ಇಳಿದಿದೆ. ಇದರ ಹಿಂದಿನ ಲೆಕ್ಕಾಚಾರ ಏನಿರಬಹುದು ಎಂದು ಜನರು ಯೋಚಿಸುತ್ತಿದ್ದಾರೆ.

ಪಹಲ್ಗಾಮ್ ನಲ್ಲಿ ಅಮಾಯಕರ ಪ್ರಾಣವನ್ನು ಉಗ್ರರು ತೆಗೆದ ಬೆನ್ನಲ್ಲೇ ಭಾರತ ಆಕ್ರೋಶಗೊಂಡಿದ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರ ನಡುವೆ ಸೂರತ್ ನ ವಾಯುನೆಲೆಯಲ್ಲಿ ಇಸ್ರೇಲ್ ನ ಅತ್ಯಾಧುನಿಕ ಯುದ್ಧ ವಿಮಾನ ಬಂದು ನಿಂತಿತ್ತು. ಇದರ ಬೆನ್ನಲ್ಲೇ ಈಗ ಅಮೆರಿಕಾ ಯುದ್ಧವಿಮಾನವೂ ಸೂರತ್ ಗೆ ಬಂದಿಳಿದಿದೆ. ನಿನ್ನೆಯೇ ಅರಬ್ಬೀ ಸಮುದ್ರ ಗಡಿಯಲ್ಲಿ ಭಾರತ ತನ್ನ ನೌಕಾ ಸೇನೆಯ ಐಎನ್‌ಎಸ್ ಯುದ್ಧನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.

ಸಧ್ಯ ಈ ಬೆಳವಣಿಗೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಭಾರತ ಏಕಾಂಗಿಯಾಗಿ ಅಲ್ಲ, ತನ್ನ ಮಿತ್ರರಾಷ್ಟ್ರಗಳ ಸಹಾಯದೊಂದಿಗೇ ಪಾಕಿಸ್ತಾನಕ್ಕೆ ಪೆಟ್ಟು ನೀಡಲು ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.