Home News Cash Transfer : ಭಾರತದಲ್ಲಿ ಯಾರು ಹೆಚ್ಚು ಹಣ ಕಳಿಸಿದ್ದಾರೆ ? ಯಾರು ಹೆಚ್ಚು ಸ್ವೀಕರಿಸಿದ್ದಾರೆ?...

Cash Transfer : ಭಾರತದಲ್ಲಿ ಯಾರು ಹೆಚ್ಚು ಹಣ ಕಳಿಸಿದ್ದಾರೆ ? ಯಾರು ಹೆಚ್ಚು ಸ್ವೀಕರಿಸಿದ್ದಾರೆ? ಸಮೀಕ್ಷೆಯ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಸಮಾಜದಲ್ಲಿ ಹಣ ಕೊಡೋದು, ತೊಗೊಳೋದು ಸಾಮಾನ್ಯ. ಇಂದಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ ಮಯವಾಗಿರೋದ್ರಿಂದ ಹಣದ ವರ್ಗಾವಣೆ ಕೂಡ ಆನ್ ಲೈನ್ ನಲ್ಲೇ ನಡೆಯುತ್ತದೆ. ಕೆಲವೊಮ್ಮೆ ಮನೆಯಲ್ಲೇ ಇರೋರಿಗೂ ಕೈಯಲ್ಲೇ ಹಣ ಕೊಡುವ ಬದಲು ಆನ್ಲೈನ್ ನಲ್ಲೇ ವರ್ಗಾವಣೆ ಆಗುತ್ತದೆ. ಇದೀಗ ಹಣದ ವರ್ಗಾವಣೆಯ ಬಗ್ಗೆ ಬೆಂಗಳೂರಿನ ‘ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ (ISEC)’ ಸಮೀಕ್ಷೆಯೊಂದನ್ನು ನಡೆಸಿದ್ದು, ಇದರಲ್ಲಿ ಯಾರು ಯಾರಿಗೆ ಹೆಚ್ಚು ಹಣ ಕಳುಹಿಸುತ್ತಾರೆ? ಎಂಬ ಮಾಹಿತಿ ಕಲೆ ಹಾಕಿದ್ದಾರೆ.

‘ಇಂಟಿಗ್ರೇಷನಲ್ ಟ್ರಾನ್ಸ್​ಫರ್ಸ್ ಇನ್ ಇಂಡಿಯಾ’ ಸಂಸ್ಥೆ ‘ಯಾರು ಹೆಚ್ಚು ಹಣ ಕೊಟ್ಟಿದ್ದಾರೆ ಮತ್ತು ಯಾರು ತೆಗೆದುಕೊಂಡಿದ್ದಾರೆ’ ಎಂಬುದರ ಮೇಲೆ ಸಮೀಕ್ಷೆ ನಡೆಸಿದ್ದು, ಇದನ್ನು ಲಿಂಗ, ಶಿಕ್ಷಣ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ವಾಸಿಸುವ ಪ್ರದೇಶ ಇತ್ಯಾದಿಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ತಲೆಮಾರುಗಳಿಂದಿರುವ  ಇತರರಿಗೆ ಹಣ ನೀಡುವುದು, ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿದೆ.

2017-18ರ ಅವಧಿಯಲ್ಲಿ ‘ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ ವೇವ್-1’ ಎಂಬ ಸಮೀಕ್ಷೆ ನಡೆಸಲಾಗಿತ್ತು. ಈ ಅಧ್ಯಯನಕ್ಕೆ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ 31,464 ಮಂದಿಯನ್ನು ಒಳಪಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಸಂಪನ್ಮೂಲ, ಭೂಮಿ, ಸಂಪತ್ತು ಹೊಂದಿರುವ ಪಾಲಕರೂ ಹಣ ಪಡೆಯುವುದು, ಕಳುಹಿಸುವುದನ್ನು ಮಾಡುತ್ತಾರೆ ಎಂದು ವರದಿ ತಿಳಿಸಿದೆ.

ಹಾಗೇ ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚು ಹಣ ಪಡೆಯುತ್ತಾರೆ. ಅಲ್ಲದೆ, ಮಹಿಳೆಯರು ಪುರುಷರಿಗೆ ಶೇ 2.8 ರಷ್ಟು ಹಣ ಕಳುಹಿಸುವುದಕ್ಕಿಂತಲೂ ಹೆಚ್ಚು ಮಕ್ಕಳಿಗೆ (ಶೇ 4.4) ರಷ್ಟು ಹಣ ಕಳುಹಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಗ್ರಾಮೀಣ ನಿವಾಸಿಗಳಿಗೆ ಹೋಲಿಸಿದರೆ ನಗರದ ಹಿರಿಯ ನಾಗರಿಕರು  ಕುಟುಂಬದವರಿಂದ ಹೆಚ್ಚು ಹಣ ಸ್ವೀಕರಿಸುತ್ತಾರೆ ಎಂದು ತಿಳಿದುಬಂದಿದೆ.

ಆದರೆ ನಗರ ಪ್ರದೇಶದ ಹಿರಿಯ ನಾಗರಿಕರಿಗಿಂತ ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರು ಮಕ್ಕಳಿಗೆ ಹಣ ಕಳುಹಿಸುವುದು ಕಡಿಮೆ. ನಗರದ ನಾಗರೀಕರು ಹೆಚ್ಚು ಹಣ ವರ್ಗಾಯಿಸುತ್ತಾರೆ. ತಂದೆ-ತಾಯಿ ಹೊಂದಿರುವ ಸಂಪನ್ಮೂಲಗಳು ಇಲ್ಲಿ ಪ್ರಭಾವ ಬೀರುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಸಂಶೋಧನಾ ತಜ್ಞ ಕಿಂಕರ್ ಮಂಡಲ್ ಹಾಗೂ ಐಎಸ್​ಇಸಿಯ ಜನಸಂಖ್ಯಾ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಲೇಖಾ ಸುಬ್ಬಯ್ಯ ಈ ಸಮೀಕ್ಷೆಯ ನೇತೃತ್ವ ವಹಿಸಿದ್ದರು.