Home News Congress Meeting: ಸೆಪ್ಟೆಂಬರ್ ಕ್ರಾಂತಿಗೆ ಅಣಿಯಾಗ್ತಿದೆಯಾ ರಾಜ್ಯ ಕಾಂಗ್ರೆಸ್‌ – ಸುರ್ಜೇವಾಲ ಒನ್ ಟು ಒನ್...

Congress Meeting: ಸೆಪ್ಟೆಂಬರ್ ಕ್ರಾಂತಿಗೆ ಅಣಿಯಾಗ್ತಿದೆಯಾ ರಾಜ್ಯ ಕಾಂಗ್ರೆಸ್‌ – ಸುರ್ಜೇವಾಲ ಒನ್ ಟು ಒನ್ ಮೀಟಿಂಗ್

Hindu neighbor gifts plot of land

Hindu neighbour gifts land to Muslim journalist

Congress Meeting: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರು ಈವರೆಗೆ ಸಚಿವ ಸಂಪುಟ ವಿಷ್ತರಣೆ ಅಥವಾ ಪುನರ್ರಚನೆ ಆಗಿಲ್ಲ. ಓಲಗೊಳಗೆ ಗುದ್ದಾಟಗಳು, ವೈಮನಸ್ಸುಗಳು ಇದ್ದರೂ ಈವರೆಗೆ ಸುಧಾರಿಸಿಕೊಂಡು ಸಿದ್ದರಾಮಯ್ಯ ರಥ ಎಳೆದುಕೋಮಡು ಬಂದಿದ್ದಾರೆ. ಇದೀಗ ಕೈ ಶಾಸಕರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಒನ್ ಟು ಒನ್ ಮೀಟಿಂಗ್ ಮಾಡಲು ಬೆಂಗಳೂರಿಗೆ ಬಂದಿಳಿದ್ದಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಗಳು ಎದ್ದಿದೆ. ಸೆಪ್ಟೆಂಬರ್ ವೇಳೆಗೆ ಸಿಎಂ ಸಿದ್ದರಾಮಯ್ಯ. ಡಿಕೆಶಿ ಅವರಿಗೆ ಕುರ್ಚಿ ಬಿಟ್ಟುಕೊಡುವ ಬಗ್ಗೆ ಕ್ರಾಂತಿಗೆ ಎರಡೂ ಬಣ ಅಣಿಯಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಇದರ ಜೊತೆಗೆ ಸಚಿವ ಸಂಪುಟ ಪುನರ್ರಚನೆ‌ಗೂ ಹೈಕಮಾಂಡ್ ತಯಾರಿ ನಡೆಸುತ್ತಿದೆ. ಆದರೆ ರಾಜ್ಯದ ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಗೆ ಯಾವುದೇ ಸ್ಪಷ್ಟತೆ ಇಲ್ಲ ಅನ್ನು ಬಗ್ಗೆ ಮಾಹಿತಿಯಿದೆ.

ಆದರೆ ಇಂದಿನ ಸುರ್ಜೇವಾಲ ಸಭೆಗೆ ಡಿಕೆ ಶಿವಕುಮಾರ್ ಆಪ್ತ ಶಾಸಕರನ್ನು ಹುರಿಗೊಳಿಸಿದ್ದಾರೆ ಎಂಬ ಮಾಃಇತಿಯಿದೆ. ಸುರ್ಜೆವಾಲ ಸಭೆಗೆ ಡಿಕೆಶಿಯಿಂದಲೂ ಶಾಸಕರಿಗೆ ಆಹ್ವಾನ ಹೋಗಿದೆ. ಕೆಲ ಶಾಸಕರಿಗೆ ತಾವೇ ಖುದ್ದು ಕರೆ ಮಾಡಿ ಆಹ್ವಾನ ನೀಡಿದ್ದಾರೆ ಡಿಕೆಶಿ. ಕೆಲ ಆಪ್ತ ಶಾಸಕರಿಗೆ ಸಂದೇಶವನ್ನೂ ಡಿಕೆಶಿ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. “ಯಾರ ಮುಂದೆ ಏನು ಹೇಳಬೇಕು.. ಎಲ್ಲಿ ಏನು ಹೇಳಬೇಕೋ ಎಲ್ಲವನ್ನೂ ಹೇಳಿ”ಎಂದು ಡಿಕೆಶಿ ಅವರ ಆಪ್ತ ಶಾಸಕರನ್ನು ತಯಾರು ಮಾಡಿದ್ದಾರೆ.

ಹೈಕಮಾಂಡ್ ಪ್ರಶ್ನೆ ಹೊರತುಪಡಿಸಿ ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳುವ ಸಾಧ್ಯತೆ ಇದ್ದು, ಶಾಸಕರ ಕಾರ್ಯಕ್ಷಮತೆ ಕೂಡ ಸುರ್ಜೆವಾಲ ಮೀಟಿಂಗ್ ನಲ್ಲಿ ಪರಿಶೀಲನೆ‌ಗೆ ಒಳಪಡಲಿದೆ. ಪಕ್ಷವನ್ನ ಸಮರ್ಥನೆ ಮಾಡಿಕೊಳ್ಳುವವರು, ಪಕ್ಷದ ಸಿದ್ಧಾಂತದ ಅಂತರ ಕಾಯ್ದುಕೊಳ್ಳುವವರು ಯಾರು? ಎಲ್ಲವನ್ನೂ ರಣದೀಪ್ ಸಿಂಗ್ ಸುರ್ಜೆವಾಲ ಚರ್ಚೆ ನಡೆಸಲಿದ್ದಾರೆ ಇಂದಿನ ಸಂಭೆಯಲ್ಲಿ.

ಇದನ್ನೂ ಓದಿ:Crime: ಚಾಕ್ಲೇಟ್ ಗಾಗಿ ಹಣ ಕೇಳಿದ 4 ವರ್ಷದ ಮಗಳನ್ನು ಕೊಂದ ತಂದೆ