Home News ಐಫೋನ್ 12 ಕೇವಲ ₹10000 ಗೆ ಲಭ್ಯ | ಬಲ್ಲಿರೇನಯ್ಯಾ ಇದರ ಅಸಲಿ ವಿಷಯ ?

ಐಫೋನ್ 12 ಕೇವಲ ₹10000 ಗೆ ಲಭ್ಯ | ಬಲ್ಲಿರೇನಯ್ಯಾ ಇದರ ಅಸಲಿ ವಿಷಯ ?

Hindu neighbor gifts plot of land

Hindu neighbour gifts land to Muslim journalist

ಐಫೋನ್ ಖರೀದಿಸಬೇಕು ಅಂದ್ರೆ ಸಾಕಷ್ಟು ಹಣ ಬೇಕು. ಪ್ರತಿಯೊಬ್ಬರಿಗೂ ಅದನ್ನು ಖರೀದಿಸುವ ಕನಸಿರುತ್ತದೆ, ಆದರೆ ಅದಕ್ಕೆ ಬೇಕಾಗುವಷ್ಟು ಹಣ ಇರೋದಿಲ್ಲ. ಇತ್ತೀಚೆಗೆ ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್ ಆಗಿರುವ ಫ್ಲಿಪ್ ಕಾರ್ಟ್, ಅಮೆಜಾನ್ ಸ್ಮಾರ್ಟ್ ಫೋನ್ ಗಳ ಮೇಲೆ ಬಂಪರ್ ಆಫರ್ ನೀಡುತ್ತಿದೆ. ಸದ್ಯ ಐಫೋನ್ ಮೇಲೆ ಆಫರ್ ಇದ್ದು, ಕೇವಲ ₹10000 ಗೆ ಲಭ್ಯವಾಗಲಿದೆ.

ಸಾಮಾನ್ಯವಾಗಿ ಐಫೋನ್ ಬೆಲೆ ಎಲ್ಲರಿಗೂ ಗೊತ್ತಿದೆ. ಎಲ್ಲಾ ಸ್ಮಾರ್ಟ್ ಫೋನ್ ಗಿಂತ ಹೆಚ್ಚೇ ಇದೆ. ಅಷ್ಟೇ ಅತ್ಯುತ್ತಮ ಸ್ಮಾರ್ಟ್ ಫೋನ್ ಕೂಡ ಹೌದು. ನೀವು ಫ್ಲಿಪ್ ಕಾರ್ಟ್, ಅಮೆಜಾನ್‌ನಂತಹ ಇಕಾಮರ್ಸ್​ ವೆಬ್​ಸೈಟ್ ಗಳಲ್ಲಿ 128GB ಮಾದರಿಯ iPhone 12 ಖರೀದಿಸಿದರೆ ಅದರ ಬೆಲೆ ಸುಮಾರು ₹ 58000 ಇರುತ್ತದೆ. ಆದರೆ, ಇದೇ ಮಾದರಿಯ ಐಫೋನ್ ಅನ್ನು ಕೇವಲ ₹ 10000ಗೆ ನೀವು ಖರೀದಿಸಬಹುದು. ಇಷ್ಟೊಂದು ಅಗ್ಗದ ಬೆಲೆಗೆ ಐಫೋನ್ 12 ಸಿಗುತ್ತಾ? ಕೆಲವೊಂದು ಸ್ಮಾರ್ಟ್ ಫೋನ್ ಕೂಡ ಇಷ್ಟು ಕಡಿಮೆ ಬೆಲೆಗೆ ಸಿಗೋದಿಲ್ಲ. ಹಾಗಿದ್ರೆ ಎಲ್ಲಿ ಸಿಗುತ್ತೆ? ಎಂಬಿತ್ಯಾದಿ ಮಾಹಿತಿ ತಿಳಿಯೋಣ.

ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ತುಂಬಾ ಕಡಿಮೆ ಬೆಲೆಗೆ ಐಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅತಿ ಹೆಚ್ಚು ಬೇಡಿಕೆ ಇರುವ ಐಫೋನ್ 12 ಅನ್ನು ಮಾರುಕಟ್ಟೆಯ ಬೆಲೆಯ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಇಲ್ಲಿ ಐಫೋನ್ ಖರೀದಿಸಬಹುದು ಎಂದು ಹೇಳಲಾಗುತ್ತಿದೆ. ಏನಿದು ಕೇವಲ ₹ 10000ಗೆ ಐಫೋನ್ 12 ? ಇದರ ಅಸಲಿಯತ್ತೇನು ?

ನಿಜ ಹೇಳಬೇಕು ಅಂದ್ರೆ, ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟವಾಗುತ್ತಿರುವ ಐಫೋನ್‌ಗಳು ಅಸಲಿ ಐಫೋನ್‌ಗಳಲ್ಲ. ಬದಲಾಗಿ ಅವುಗಳು ಅಸಲಿ ಐಫೋನ್‌ಗಳಂತೆ ಕಾಣುವ ಫೋನ್‌ಗಳಾಗಿವೆ. ಸದ್ಯ ಈ ಫೋನ್ ನ ವಿನ್ಯಾಸ ನೋಡಿ ಜನರು ಅಸಲಿ ಐಫೋನ್ ಎಂದು ಮಾರುಹೋಗಿ, ಮೋಸ ಹೋಗುತ್ತಿದ್ದಾರೆ. ಅಲ್ಲದೆ, ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಖರೀದಿಸುವ ಐಫೋನ್‌ಗಳಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಅದು ಯಾವಾಗ ಬೇಕಾದರೂ ಹಾಳಾಗಬಹುದು. ಖರೀದಿಸಿದ ನಾಲ್ಕೇ ದಿನಕ್ಕೆ ಹಾಳಾಗಬಹುದು, ಗ್ಯಾರಂಟಿಯೂ ಇಲ್ಲ. ನಂತರ ಏನು ಮಾಡಲೂ ಸಾಧ್ಯವಿಲ್ಲ.

ಸಾಮಾನ್ಯ ಐಫೋನ್‌ಗಳಿಗಿಂತ ಈ ಐಫೋನ್ ಗಳು ತುಂಬಾ ವಿಭಿನ್ನವಾಗಿದೆ. ಈ ಐಫೋನ್ ಗಳು ಡಿಸ್ಪ್ಲೇ ಯಾವುದೇ ವಿಷಯದಲ್ಲಿ ನಿಜವಾದ ಐಫೋನ್‌ಗಳಿಗೆ ಎಲ್ಲಿಯೂ ಸರಿದೂಗುವುದಿಲ್ಲ. ಇಂತಹ ಐಫೋನ್ ಖರೀದಿಸುವ ಬದಲು ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಖರೀದಿಸುವುದು ಉತ್ತಮ. ಗ್ಯಾರಂಟಿಯೂ ಇರುತ್ತದೆ, ಬಾಳಿಕೆಯೂ ಬರುತ್ತದೆ. ಬಳಕೆಗೂ ತೊಂದರೆಯಾಗದು.