Home News Investment Tips : ಈ ಯೋಜನೆಯಲ್ಲಿ ದಿನಾ ರೂ.200 ಹೂಡಿಕೆ ಮಾಡಿ, ಬಂಪರ್ ಹಣ ಪಡೆಯಿರಿ

Investment Tips : ಈ ಯೋಜನೆಯಲ್ಲಿ ದಿನಾ ರೂ.200 ಹೂಡಿಕೆ ಮಾಡಿ, ಬಂಪರ್ ಹಣ ಪಡೆಯಿರಿ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಜೀವ ವಿಮಾ ನಿಗಮ ನಿಮ್ಮ ಭವಿಷ್ಯದ ಭರವಸೆ ಹೆಚ್ಚಿಸುತ್ತದೆ. ಮುಖ್ಯವಾಗಿ ಈ ಭಾರತೀಯ ಜೀವ ವಿಮಾ ನಿಗಮ ಪಾಲಿಸಿಯ ಯೋಜನೆಯು ವಿಮಾ ಸುರಕ್ಷತೆಯೊಂದಿಗೆ ಉಳಿಯತಾಯದ ಉದ್ದೇಶವನ್ನೂ ಒಳಗೊಂಡಿರುವ ಯೋಜನೆಯಾಗಿದೆ. ಯೋಜನೆಯು ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರದೆ, ಅಕಾಲಿಕ ಮರಣ ಹೊಂದಿದರೆ ಕುಟುಂಬದವರಿಗೆ ವಿಮೆ ನೀಡುವುದರ ಜತೆಗೆ ಹೂಡಿಕೆಯ ದುಪ್ಪಟ್ಟು ಗಳಿಸಲು ಅವಕಾಶ ಮಾಡಿಕೊಡುತ್ತದೆ.

ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿರುವ ಜಾಗದಲ್ಲಿ ಹಾಗೂ ಲಾಭದಾಯಕವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಎಲ್ಐಸಿ ಸೂಪರ್ಹಿಟ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದು ಉತ್ತಮ.

ಪ್ರಸ್ತುತ LIC ಜೀವನ್ ಪ್ರಗತಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಂದರೆ IRDA ಯ ನಿಯಮಗಳನ್ನು ಅನುಸರಿಸುವ ವಿಶೇಷ ಪಾಲಸಿಯಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಈ ಪಾಲಸಿ ಅಪಾಯದ ರಕ್ಷಣೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು 3 ಫೆಬ್ರವರಿ 2016 ರಂದು ಪ್ರಾರಂಭಿಸಲಾಗಿದೆ.

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವನ್ ಪ್ರಗತಿ ಯೋಜನೆಯಲ್ಲಿ ನೀವು ನಿಯಮಿತ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಪಾಲಿಸಿಯಲ್ಲಿ ನೀವು ಲೈಫ್ ಕವರ್ (ಮರಣ ಪ್ರಯೋಜನ) ಸಹ ಪಡೆಯುತ್ತೀರಿ ಇದು ಪ್ರತಿ 5 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಮೊತ್ತವು ನಿಮ್ಮ ಪಾಲಿಸಿ ಎಷ್ಟು ಸಮಯದವರೆಗೆ ಸಕ್ರೀಯ ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಎಲ್ಐಸಿ ಸೂಪರ್ಹಿಟ್ ಯೋಜನೆಯಲ್ಲಿ ನೀವು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆದಾರರು ಇದರಲ್ಲಿ ದಿನಕ್ಕೆ 200 ರಂತೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಪಾಲಿಸಿಯನ್ನು 12 ವರ್ಷ ವಯಸ್ಸಿನಿಂದಲೇ ಪ್ರಾರಂಭಿಸಬಹುದು. ಇದರಲ್ಲಿ ಗರಿಷ್ಠ ಹೂಡಿಕೆ ವಯಸ್ಸು 45 ವರ್ಷಗಳು ಆಗಿರುತ್ತದೆ.

ಎಲ್ಐಸಿ ಸೂಪರ್ಹಿಟ್ ಯೋಜನೆ ಪಾಲಸಿಯ ವಿಶೇಷತೆ :

  • ಈ ಪಾಲಿಸಿಯಲ್ಲಿ 100% ಮೂಲ ವಿಮಾ ಮೊತ್ತವನ್ನು ಪಾಲಿಸಿದಾರನ ಮರಣದ ಮೇಲೆ ಪಾಲಿಸಿಯನ್ನು ತೆಗೆದುಕೊಂಡ ದಿನಾಂಕದಿಂದ 5 ವರ್ಷಗಳವರೆಗೆ ಸಮ್ ಅಸ್ಯೋರ್ಡ್ ಅನ್ನು ಪಾವತಿಸಲಾಗುತ್ತದೆ.
  • ಈ ಪಾಲಿಸಿಯನ್ನು ತೆಗೆದುಕೊಂಡು 6 ರಿಂದ 10 ವರ್ಷಗಳ ನಡುವಿನ ಪಾಲಿಸಿದಾರರ ಮರಣದ ಮೇಲೆ 125%, 11 ರಿಂದ 15 ವರ್ಷಗಳ ನಡುವೆ 150% ಮತ್ತು 16 ಮತ್ತು 20 ವರ್ಷಗಳ ನಡುವೆ 200% ಪಾವತಿಸಲಾಗುತ್ತದೆ.
  • ಈ ಯೋಜನೆಯಲ್ಲಿ ಅಪಘಾತ ಪ್ರಯೋಜನ ಮತ್ತು ಅಂಗವೈಕಲ್ಯ ರೈಡರ್ ನ ಲಾಭವನ್ನು ಸಹ ಪಡೆಯಬಹುದು. ಇದಕ್ಕಾಗಿ ನೀವು ಸ್ವಲ್ಪ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.
  • ಜೀವನ್ ಪ್ರಗತಿ ಯೋಜನೆಯ ಸಂಪೂರ್ಣ ಮೆಚ್ಯೂರಿಟಿ ನಂತರ, ನೀವು ರೂ 28 ಲಕ್ಷ ಮೊತ್ತವನ್ನು ಲಾಭದ ರೂಪದಲ್ಲಿ ಪಡೆದುಕೊಳ್ಳಬಹುದು.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಂದರೆ IRDA ಯ ನಿಯಮಗಳನ್ನು ಅನುಸರಿಸುವ ವಿಶೇಷ ಪಾಲಸಿಯಾಗಿದ್ದು ಈ ಯೋಜನೆಯಲ್ಲಿ ಉತ್ತಮ ಲಾಭವನ್ನು ಪಡೆದು ಮತ್ತು ನಿಮಗೆ ಮಿಲಿಯನರ್ ಆಗುವ ಅವಕಾಶ ಇದೆ.