Home News Post Office ನ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ, ಪ್ರತೀ ತಿಂಗಳು 5,550 ರೂ....

Post Office ನ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ, ಪ್ರತೀ ತಿಂಗಳು 5,550 ರೂ. ಗಳಿಸಿ!!

Hindu neighbor gifts plot of land

Hindu neighbour gifts land to Muslim journalist

Post Office : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿಯು ಜನರಿಗೆ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ನೀವು ಅಲ್ಪ ಪ್ರಮಾಣದ ಹೂಡಿಕೆಗಳನ್ನು ಮಾಡಿ ಅಧಿಕ ಲಾಭಗಳನ್ನು ಗಳಿಸಬಹುದಾಗಿದೆ. ಅದರಲ್ಲಿ ಪೋಸ್ಟ್ ಆಫೀಸ್ ಜಾರಿಗೆ ತಂದ ಮಾಸಿಕ ಆದಾಯ ಯೋಜನೆ (MIS) ಕೂಡ ಒಂದು.

ಹೌದು, ಮಾಸಿಕ ಆದಾಯ ಯೋಜನೆ (MIS) ನಿವೃತ್ತ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಸೂಕ್ತವಾಗಿದೆ. ಈ ಯೋಜನೆಯಡಿ ಐದು ವರ್ಷಗಳ ಅವಧಿಗೆ ನಿಮಗೆ ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆ ಮೂಲಕ ಜನರು, ತಾವು ಹೂಡಿಕೆ ಮಾಡಿದ ಹಣಕ್ಕೆ 7.4% ಬಡ್ಡಿ ದರವನ್ನು ಪಡೆಯಬಹುದು. ಕೆಲವು ಬ್ಯಾಂಕುಗಳಿಗಿಂತಲೂ ಈ ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ.

ಮಾಸಿಕ ಆದಾಯ ಯೋಜನೆ ಮೂಲಕ 1 ಲಕ್ಷ ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು 616 ರೂಪಾಯಿವರೆಗೆ ಪಡೆಯಬಹುದು. ಅದೇ ನಿಮ್ಮ ಹೂಡಿಕೆಯ ಮೊತ್ತ 5 ಲಕ್ಷ ರೂ.ಗೆ ಹೆಚ್ಚಿಸಿದರೆ, ನಿಮ್ಮ ತಿಂಗಳ ಆದಾಯ ರೂ. 3,083 ಪಡೆಯಬಹುದು. ಆದ್ದರಿಂದ ಮನೆಯಲ್ಲೇ ಕೂತು ತಿಂಗಳಿಗೆ ಸಾವಿರಗಟ್ಟಲೆ ಹಣ ಸಂಪಾದಿಸಬಹುದು. ಆದರೆ ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದರ ಮೇಲೆ ನಿಮಗೆ ಸಿಗುವ ಬಡ್ಡಿ ನಿರ್ಧಾರವಾಗುತ್ತದೆ. ಅಲ್ಲದೇ ಈ ಯೋಜನೆಗೆ ನೀವು ವೈಯಕ್ತಿಕ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು.