Home News Result:ಇನ್‌ವರ್ಟ‌ರ್ ರಿಪೇರಿಯವರ ಮಗಳು ದೀಪಶ್ರೀ ಕೈಯಲ್ಲಿ ರಾಜ್ಯದ ಪ್ರಥಮ ರಾಂಕ್- ಕೆನರಾ ಪಿಯು ಕಾಲೇಜು ಸಾಧನೆ!

Result:ಇನ್‌ವರ್ಟ‌ರ್ ರಿಪೇರಿಯವರ ಮಗಳು ದೀಪಶ್ರೀ ಕೈಯಲ್ಲಿ ರಾಜ್ಯದ ಪ್ರಥಮ ರಾಂಕ್- ಕೆನರಾ ಪಿಯು ಕಾಲೇಜು ಸಾಧನೆ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಾನು ಸಿಎ ಆಗುವ ಗುರಿಯನ್ನಿರಿಸಿಕೊಂಡು ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡಿದ್ದೆ. 595 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇತ್ತು. ಆದರೆ ಪ್ರಥಮ ರಾಂಕ್ ಬರುತ್ತದೆ ಅಂದುಕೊಂಡಿರಲಿಲ್ಲ’ ಎನ್ನುತ್ತಾರೆ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ.

ದೀಪಶ್ರೀ 2024-2025 ರ ಸಾಲಿನ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಿಕರ್ನಕಟ್ಟೆಯ ವಾಸಿ ಗೃಹಿಣಿ ಸುಮಾ ಮತ್ತು ಇನ್‌ವರ್ಟ‌ರ್ ಸರ್ವಿಸ್ ವೃತ್ತಿಯಲ್ಲಿರುವ ಅಶೋಕ್ ದಂಪತಿಯ ಪುತ್ರಿ ದೀಪಶ್ರೀಯವರು ಎಸೆಸೆಲ್ಸಿಯಲ್ಲಿ ಕೂಡಾ ಉನ್ನತ ಸಾಧನೆ ಮಾಡಿದ್ದು, ಅವರು ಶೇ. 98.24 ಅಂಕಗಳನ್ನು ಗಳಿಸಿದ್ದರು.