Home News ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಟ್ರಾಫಿಕ್ ಮಧ್ಯೆ ಮರ್ಲ್ ಕಟ್ಟಿದ ಯುವತಿ!!ಬಳುಕುವ ಸೊಂಟದ...

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಟ್ರಾಫಿಕ್ ಮಧ್ಯೆ ಮರ್ಲ್ ಕಟ್ಟಿದ ಯುವತಿ!!ಬಳುಕುವ ಸೊಂಟದ ವೀಡಿಯೋ ಹೆಚ್ಚು ವೀಕ್ಷಣೆ ಪಡೆಯಿತಾದರು ಆಕೆಯ ಮೇಲೆ ಬಿತ್ತು ಕೇಸ್

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗೆ ಯುವಕ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತಲ್ಲೀನರಾಗುತ್ತಿರುವುದು,ಫೋಟೋ ಸಹಿತ ನಿಜ ಜೀವನದ ಪ್ರತಿಯೊಂದನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಅದರಲ್ಲಿ ಬರುವ ಕಾಮೆಂಟ್ಸ್, ಲೈಕ್ಸ್ ಗಳಿಗೆ ಖುಷಿ ಪಡುತ್ತಿರುವುದು ವಾಸ್ತವದ ಸಂಗತಿ.

ಆದರೆ ಅಂತಹುದೇ ಜಾಲತಾಣದ ಹುಚ್ಚು ಹಿಡಿದಿದ್ದ ಮಧ್ಯಪ್ರದೇಶದ ಶ್ರೇಯ ಕಲ್ರಾ ಎಂಬ ಹೆಸರಿನ ಯುವತಿಯೋರ್ವಳು, ತನ್ನ ಫಾಲೋವರ್ ಗಳಿಗೆ ಖುಷಿಯ ಸಿಹಿಯಾದ ಔತಣ ಉಣಬಡಿಸಬೇಕು, ಹಾಗೂ ತನಗೆ ಹೆಚ್ಚು ಲೈಕ್ ಸಿಗಬೇಕೆಂದು ನಡುರಸ್ತೆಯಲ್ಲಿ ರಸ್ತೆ ಸುರಕ್ಷತೆ ನಿಯಮವನ್ನು ಮೀರಿ,ಡಾನ್ಸ್ ಮಾಡಿದ್ದು, ತನ್ನ ಕಪಿ ಚೇಷ್ಟೆ, ಬಳುಕುವ ಸೊಂಟದ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ.

ಅಂದುಕೊಂಡಂತೆ ಆಕೆಯ ಆ ಬಳುಕುವ ಸೊಂಟದ ನೃತ್ಯ ಹೆಚ್ಚು ವೀಕ್ಷಣೆ ಪಡೆಯಿತು, ಅವಳ ನೃತ್ಯಕ್ಕೆ ಆಕೆಯ ಫಾಲೋವರ್ಸ್ ಗಳೆಲ್ಲರೂ ಫಿದಾ ಆಗಿ ಕಾಮೆಂಟ್ ಕೂಡಾ ಮಾಡಿದ್ದರು.ಆದರೆ ಈಕೆಯ ಕಪಿಚೇಷ್ಟೆಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದು, ಮಿತಿಮೀರಿದ ಈಕೆಯ ಮೇಲೆ ಪ್ರಕರಣವೂ ದಾಖಲಾಗಿದೆ.ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾಳೆಂದು ಆಕೆಯ ಮಧ್ಯಪ್ರದೇಶದ ಗೃಹಸಚಿವರು ಕೂಡಾ ಇದನ್ನು ವಿರೋಧಿಸಿದ್ದು ಆಕೆಯ ಮೇಲೆ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದ್ದಾರೆ.