Home News Knockout Team: ಸ್ಯಾಂಡಲ್‌ವುಡ್‌ನಲ್ಲಿ ವಿನೂತನ ಪ್ರಯೋಗ, ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ...

Knockout Team: ಸ್ಯಾಂಡಲ್‌ವುಡ್‌ನಲ್ಲಿ ವಿನೂತನ ಪ್ರಯೋಗ, ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ – ಯಾವ ಸಿನಿಮಾದಿಂದ ಆರಂಭ?

Knockout Team

Hindu neighbor gifts plot of land

Hindu neighbour gifts land to Muslim journalist

Knockout Team: ಇಂದು ಕನ್ನಡ ಸಿನಿಮಾಗಳು ಕಡಿಮೆ ರಿಲೀಸ್ ಆಗುತ್ತಿರುವುದು ಒಂದು ರೀತಿ ವಿಷಾದದ ವಿಚಾರವೆಂದೇ ಹೇಳಬಹುದು. ಯಾಕೆಂದರೆ ಕನ್ನಡ ಸಿನಿಮಾ ನೋಡುವವರೇ ಇಲ್ಲ, ನೋಡಿದ್ರೂ ಸ್ಟಾರ್ ನಟರ ಸಿನಿಮಾಗಳನ್ನು ಮಾತ್ರ ಎನ್ನುವಂತಾಗಿದೆ. ಅದರಲ್ಲೂ ಈ ಒಟಿಟಿಗಳ(OTT) ಹಾವಳಿಯಿಂದ ಇದು ತುಸು ಹೆಚ್ಚೆನ್ನಬಹುದು. ಒಟ್ಟಾರೆ ವೀಕ್ಷಕರಿಗೆ ಸ್ಯಾಂಡಲ್‌ವುಡ್‌(Sandalwood)ಮೇಲೆ ಹೋಪ್ ಕಡಿಮೆ ಆಗುತ್ತಿದೆ. ಹೀಗಾಗಿ ಇದರಿಂದಾಗಿ ಬೇಸತ್ತ ಸಿನಿಮಾ ತಂಡವೊಂದು ಪ್ರೇಕ್ಷಕರನ್ನು ಸೆಳೆಯಲು ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಹೌದು, ನೌಕ್‌ಔಟ್‌ ಚಿತ್ರತಂಡವು(Knockout Team) ತನ್ನ ವಿಶೇಷ ಪ್ಲಾನ್ ಮೂಲಕ ವೀಕ್ಷಕರ ಗಮನ ಸೆಳೆಯಲು ಮುಂದಾಗಿದೆ. ಅದೇನೆಂದರೆ ಜುಲೈ 19ರಂದು ನಾಕ್‌ಔಟ್‌ ಸಿನಿಮಾ ರಿಲೀಸ್ ಆಗುತ್ತಿದ್ದು ಅಂದು ಅರ್ಧ ಸಿನಿಮಾವನ್ನು ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ ಟಿಕೆಟ್‌ ಖರೀದಿಸಿ ಎಂದು ಹೇಳಿದೆ. ಅಂದರೆ ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಪಡೆಯಿರಿ ಎಂದ ತಂಡ ಹೇಳಿದೆ.

ಅಂದರೆ ಇದರ ಅರ್ಥ ಏನೆಂದರೆ ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಅಂತ ಹೊರ ಬಂದು ಬೇಸರ ಮಾಡಿಕೊಳ್ಳುವ ಬದಲು, ಫಸ್ಟ್‌ ಹಾಫ್‌ ಸಿನಿಮಾ ನೋಡಿದ ಮೇಲೆ ಏನೋ ಇಂಟ್ರೆಸ್ಟಿಂಗ್ ಆಗಿದೆ ಅಂತ ಎರಡನೇ ಭಾಗ ನೋಡಲು ಮುಂದಾಗುವವರು ಟಿಕೆಟ್‌ ಖರೀದಿಸಬೇಕಾಗುತ್ತದೆ.

ಅಂದಹಾಗೆ ನಿರ್ದೇಶಕ ಅಂಬರೀಶ್ ಅವರು ಈ ಬಗ್ಗೆ ಮಾತನಾಡಿದ್ದು, ಚಿತ್ರ ಗುಣಮಟ್ಟವನ್ನು ಮೊದಲರ್ಧ ಸಿನಿಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ ಸೆಕೆಂಡ್ ಹಾಫ್‌ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಇರತ್ತದೆ’ ಎಂದು ಹೇಳಿದ್ದಾರೆ.

Kadaba: ಕುಮಾರಧಾರ ನದಿ ಮಧ್ಯೆ ಪೊದೆಯಲ್ಲಿ ಸಿಲುಕಿದ ಯುವಕನ ರಕ್ಷಣೆ