Home News ಆಲಂಕಾರು ಕಟ್ಟಡ ಕಾರ್ಮಿಕರ ಮಜ್ದೂರು ಸಂಘದಿಂದ ಮಾಹಿತಿ ಕಾರ್ಯಗಾರ

ಆಲಂಕಾರು ಕಟ್ಟಡ ಕಾರ್ಮಿಕರ ಮಜ್ದೂರು ಸಂಘದಿಂದ ಮಾಹಿತಿ ಕಾರ್ಯಗಾರ

Hindu neighbor gifts plot of land

Hindu neighbour gifts land to Muslim journalist

ಕಡಬ: ಪ್ರಸಕ್ತ ನಮ್ಮನ್ನಾಳುವ ಕೇಂದ್ರ ರಾಜ್ಯ ಸರ್ಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಅನುಷ್ಠಾನಿಸಿ ಆ ಮೂಲಕ ಶ್ರಮಿಕ ವರ್ಗಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸುತ್ತಿದೆ. ಸರ್ಕಾರ ನೀಡುವ ಸೌಲಭ್ಯವನ್ನು ಪಡೆಯುವ ಮಾನಸೀಕ ಮನೋಸ್ಥಿತಿಯನ್ನು ಬೆಳೆಸಿಕೊಂಡಾಗ ಯೋಜನೆಯ ಧೈಯೊದ್ದೇಶ ಫಲಪ್ರಧವಾಗುತ್ತದೆ ಎಂದು ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಕಡಬ ತಾಲೂಕು ಸಮಿತಿ, ಅಶ್ರಯದಲ್ಲಿ ಕೊÊಲ, ರಾಮಕುಂಜ, ಹಳೆನೇರೆಂಕಿ, ಕುಂತೂರು, ಪೆರಾಬೆ, ಬಲ್ಯ ಗ್ರಾಮ ಸಮಿತಿ ಒಳಗೊಂಡ ಆಲಂಕಾರು ವಲಯದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಮಾಹಿತಿ ಕಾರ್ಯಗಾರ ಮತ್ತು ಬಿ ಎಂ ಎಸ್ ಸದಸ್ಯತ್ವ , ಅಬಾ ಕಾರ್ಡು ನೋಂದಾಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರವರ್ತಿತ ಭಾರತೀಯ ಮಜ್ದೂರು ಸಂಘ ಭ್ರಷ್ಟಚಾರಕ್ಕೆ ಆಸ್ಪದ ಕೊಡದೆ ಕಾರ್ಮಿಕರ ಶ್ರೋಯೋಭಿವೃದ್ದಿಗೆ ಶ್ರಮಿಸುತ್ತಿದೆ. ಸರ್ಕಾರದ ಯೋಜನೆಗಳನ್ನು ಯಾವೂದೆ ಫಲಾಪೇಕ್ಷೆಯಿಲ್ಲದೆ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುತ್ತಿದೆ. ಕಾರ್ಮಿಕರು ಸಂಘದಲ್ಲಿಸದಸ್ಯತ್ವ ಪಡೆದು ಕಾರ್ಮಿಕರ ಸೌಲಭ್ಯಗಳನ್ನು ಪಡೆದಲ್ಲಿ ಸಂಘಕ್ಕೂ ಬಲ ಬರುತ್ತದೆ ಎಂದರು.

ಮಜ್ದೂರು ಸಂಘದ ಕಡಬ ತಾಲೂಕು ಅಧ್ಯಕ್ಷ ತು.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಮಾಹಿತಿ ನೀಡಿದರು.

ಬಿಎಮ್‌ಎಸ್ ದ.ಕ ಜಿಲ್ಲಾ ಅಧ್ಯಕ್ಷ ಅನಿಲ್ ದಡ್ಡು, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಆಚಾರ್ಯ, ಆಲಂಕಾರು ಸಿ ಎ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಧ್ಯಕ್ಷ ದಾಮೋದರ ಕಕ್ವೆ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ಶುಭಹಾರೈಸಿದರು.

ಬಿ ಎಮ್ ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಕುಮಾರನಾಥ ಉಜಿರೆ, ಸಾಂತಪ್ಪ, ಆಲಂಕಾರು ಕೋಟಿ ಚೆನ್ನಯ್ಯ ಮಿತ್ರವೃಂದ ದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ , ಬಿಎಮ್‌ಎಸ್ ಕಡಬ ತಾಲೂಕು ಉಪಾಧ್ಯಕ್ಷ ಕೇಶವ, ಕಾರ್ಯದರ್ಶಿ ಜನಾರ್ದನ ಗೌಡ ಆರಿಗ ಬಲ್ಯ ಉಪಸ್ಥಿತರಿದ್ದರು. ಸನ್ಮಾನ ಹಿರಿಯ ಕಾರ್ಮಿಕರಾದ ಅಣ್ಣು ಪೂಜಾರಿ ಹಳೆನೇರಿಂಕಿ , ನೋಣಯ್ಯ ಗೌಡ ಕೆರೆನಡ್ಕ ಬಲ್ಯ, ಪರಮೇಶ್ವರ ಆಚಾರ್ಯ ಜಯಂಪಾಡಿ ಕುಂತೂರು, ಕುಂಞಣ್ಣ ಗೌಡ ಪುಣ್ಕೆತ್ತಡಿ ಕೊÊಲ, ಕುಶಾಲಪ್ಪ ಗೌಡ ನೆಕ್ಕಿಲಾಡಿ ಆಲಂಕಾರು ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಮಿಕರಿಗಾಗಿ ಸರ್ಕಾರದಿಂದ ನೀಡಲ್ಪಟ್ಟ ಉಚಿತ ಬಸ್ಸು ಪಾಸು, ಕಾರ್ಮಿಕರ ಕಾರ್ಡು, ಮದುವೆ ಸಹಾಯಧನ, ಅಂತಿಮ ಸಂಸ್ಕಾರ, ಅನುಗ್ರಹ ರಾಶಿ ಸಹಾಯಧನದ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಬಿಎಮ್‌ಎಸ್ ಆಲಂಕಾರು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪೆ ಪ್ರಸ್ತಾವಿಸಿ ಸ್ವಾಗತಿಸಿದರು. ಶೀನಪ್ಪ ಕುಂಬಾರ ವಂದಿಸಿದರು. ಶಿಕ್ಷಕ ಪ್ರದೀಪ್ ಬಾಕಿಲ ನಿರೂಪಿಸಿದರು.