Home News ಆಸ್ತಿ ವರ್ಗಾಯಿಸುತ್ತಿದ್ದೀರಾ ? ಅದಕ್ಕೂ ಮುನ್ನ ಈ ಮುಖ್ಯವಾದ ಮಾಹಿತಿ ತಿಳಿದುಕೊಳ್ಳಿ

ಆಸ್ತಿ ವರ್ಗಾಯಿಸುತ್ತಿದ್ದೀರಾ ? ಅದಕ್ಕೂ ಮುನ್ನ ಈ ಮುಖ್ಯವಾದ ಮಾಹಿತಿ ತಿಳಿದುಕೊಳ್ಳಿ

Hindu neighbor gifts plot of land

Hindu neighbour gifts land to Muslim journalist

ವ್ಯಕ್ತಿಯು ತನ್ನ ಸ್ವಯಾರ್ಜಿತ ಆಸ್ತಿಯನ್ನು ತಮಗಿಷ್ಟ ಬಂದ ವ್ಯಕ್ತಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆ ಮೂಲಕ ನೀಡುವುದಕ್ಕೆ ದಾನ ಎನ್ನುತ್ತಾರೆ. ಕಾನೂನಿನ ಮಾನ್ಯತೆಗಾಗಿ, ದಾನ ಪತ್ರ ಬರೆಯಿಸಿ, ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸುತ್ತಾರೆ. ಹೀಗೆ ಮಾಡಿದರೆ ಮಾತ್ರ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರಲಿದೆ. ಇನ್ನು ದಾನ ಪತ್ರ ಹೇಗೆ ಬರೆಯಬೇಕು? ನೋಂದಣಿಗೆ ಬೇಕಾಗುವ ದಾಖಲೆಗಳು? ಎಂಬಿತ್ಯಾದಿಗಳ ಮಾಹಿತಿ ತಿಳಿಯೋಣ.

ದಾನಪತ್ರ ನೋಂದಣಿಗೆ ಬೇಕಾಗುವ ದಾಖಲೆಗಳು ಯಾವುದು ?

  • ದಾನ ಮಾಡುವ ವ್ಯಕ್ತಿಯ ಜಮೀನು ಅಥವಾ ಸ್ಥಿರಾಸ್ತಿಯ ಹಕ್ಕುಪತ್ರ/ ಪಹಣಿ ಪತ್ರ‌ ಬೇಕಿದೆ.
  • ದಾನ ಮಾಡುವವರ ಹಾಗೂ ದಾನ ಪಡೆಯುವವರ ಆಧಾರ ಕಾರ್ಡ್ ಇರಬೇಕು.
  • ಇನ್ನು ನೀವು ಕುಟುಂಬದ ಸದಸ್ಯರಿಗೆ ದಾನ ಮಾಡಲು ಬಯಸಿದ್ದರೆ ಆಗ ವಂಶಾವಳಿ ಪತ್ರ ಬೇಕು.
  • ದಸ್ತಾವೇಜು ಹಾಳೆಗಳಲ್ಲಿ ದಾನಪತ್ರ ಬರೆದು ನೋಟರಿಯವರ ದೃಢೀಕರಣ

ದಾನಪತ್ರ ಬರೆಯುವುದು ಹೇಗೆ ?

ದಾನ ಕೊಡುವವರ ಹೆಸರನ್ನು ಮತ್ತು ದಾನ ಪಡೆಯುವವರ ಹೆಸರನ್ನು ಬರೆಯಬೇಕು. ನಂತರ ದಾನ ಕೊಡುವವರ ಆಸ್ತಿಯ ಸಂಕ್ಷಿಪ್ತ ವಿವರವನ್ನು ಬರೆಯಬೇಕು.

ವಿವರಣೆ :

  • ದಾನ ಮಾಡುವವರ ಆಸ್ತಿಯ ಸರ್ವೆ ನಕಾಶೆ ಪ್ರಕಾರ ವಿವರವನ್ನು ಸಂಕ್ಷಿಪ್ತವಾಗಿ ವಿಸ್ತರಿಸಿ ಬರೆಯಬೇಕು.
  • ದಾನ ಪಡೆಯುವವರ ಆಸ್ತಿಯ ವಿವರಣೆ ದಾನಪತ್ರದ ಪ್ರಕಾರ ಗ್ರಾಮ, ಸರ್ವೆ ನಂ, ವಿಸ್ತೀರ್ಣ ಮತ್ತು ಚಕ್ಕುಬಂದಿ ಅಂದ್ರೆ ಸರ್ವೆ ನಕಾಶೆ ಪ್ರಕಾರ ವಿವರವನ್ನು ಬರೆಯಬೇಕು.
  • ಈ ದಸ್ತಾವೇಜು 2 ಹಾಳೆಗಳ ಮೇಲೆ ಮುದ್ರಿಸಿ ಮುದ್ರಾಂಕದ ಶುಲ್ಕವನ್ನು ಬರೆಯಬೇಕು.
  • ಹಾಗೇ ದಾನ ಮಾಡುವವರು ಮತ್ತು ದಾನ ಪಡೆಯುವವರು ಹೆಸರು ಬರೆದು, ಸಹಿ ಹಾಕಬೇಕು. ಇದರ ಜೊತೆಗೆ ಸಾಕ್ಷಿಗಳ ಸಹಿ ಕೂಡ ಬೇಕು.
  • ಈ ರೀತಿ ದಾನಪತ್ರವನ್ನು ಬರೆಸಿಕೊಂಡ ನಂತರ ವಕೀಲರಿಂದ ನೋಟರಿ ಮಾಡಿಸಿಕೊಂಡು ದಾನ ಮಾಡುವವರು, ದಾನ ಪಡೆಯುವವರು ಮತ್ತು ಸಾಕ್ಷಿದಾರರು ಉಪನೋಂದಣಿ ಕಚೇರಿಗೆ ಭೇಟಿ ನೀಡಿ, ಎಲ್ಲಾ ದಾಖಲೆಗಳನ್ನು ನೀಡಿ, ದಾನ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು.

ಇದು ನೀವು ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶವಾಗಿದೆ. ಸ್ವಯಾರ್ಜಿತ ಆಸ್ತಿಯನ್ನು ನೀವು ನಿಮಗಿಷ್ಟ ಬಂದ ವ್ಯಕ್ತಿಗೆ ದಾನ ಮಾಡಬಹುದು. ನೀವು ರಕ್ತ ಸಂಬಂಧಿಕರಲ್ಲದವರಿಗೆ ಆಸ್ತಿ ದಾನ ಮಾಡಲು ಬಯಸಿದರೆ ಆ ಆಸ್ತಿಯ ಮೌಲ್ಯದ 5% ರಷ್ಟು ಹಣವನ್ನು ತೆರಿಗೆಯಾಗಿ ಕಟ್ಟಬೇಕಾಗುತ್ತದೆ‌‌. ರಕ್ತಸಂಬಂಧಿಕರಿಗೆ ದಾನ ಮಾಡಿದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ಇನ್ನು ಮುಖ್ಯವಾಗಿ ಈ ದಾನ ಪತ್ರದಲ್ಲಿ ಸಾಕ್ಷಿದಾರರ ಸಹಿ ಇರಬೇಕು. ಖಾತಾ ಹಕ್ಕು ಬದಲಾವಣೆ ಪ್ರಕ್ರಿಯೆ ಇದ್ದರೆ ಸದರಿ ದಾನಪತ್ರ ಪಡೆದು, ‘ಜೆ’ ಫಾರ್ಮ್ ಪಡೆದು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಬೇಕು.