Home News Indira canteen: ಅಕ್ರಮ ಚಟುವಟಿಕೆಗಳ ತಾಣವಾಗಿರುವ ಇಂದಿರಾ ಕ್ಯಾಂಟೀನ್: ಸ್ಥಳೀಯರ ಆಕ್ರೋಶ

Indira canteen: ಅಕ್ರಮ ಚಟುವಟಿಕೆಗಳ ತಾಣವಾಗಿರುವ ಇಂದಿರಾ ಕ್ಯಾಂಟೀನ್: ಸ್ಥಳೀಯರ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

Indira canteen: ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ನ್ನು ಕಾಂಗ್ರೆಸ್ ಸರಕಾರ ಆರಂಭಿಸಿತ್ತು. ಆದ್ರೇ ಇದೀಗ ಕ್ಯಾಂಟೀನ್‌ (Indira canteen) ಬಗ್ಗೆ ಒಂದಲ್ಲ ಒಂದು ವಿವಾದಗಳು ಕೇಳಿ ಬರುತ್ತಿದೆ. ಇದೀಗ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಒಂದಕ್ಕೆ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳೆದರೂ ಕಳೆದ ಅವಧಿಯಲ್ಲಿ ನಿರ್ಮಾಣವಾಗಿದ್ದ ವಾರ್ಡ್ ನಂಬರ್ 155ರ ಹನುಮಂತನಗರದ ಇಂದಿರಾ ಕ್ಯಾಂಟೀನ್ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಪೊದೆಗಳು ಬೆಳೆದಿದ್ದು, ಅಷ್ಟೇ ಅಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಹೌದು, ಈಗಾಗಲೇ ಕ್ಯಾಂಟೀನ್ ಕೂಡ ಕ್ಲೋಸ್ ಆಗಿದ್ದು ಇದು ಅನೈತಿಕ ಚಟುವಟಿಕೆಗಳ ಸ್ಥಳವಾಗಿದೆ. ಅಲ್ಲದೇ ಕ್ಯಾಂಟೀನ್ ಮುಂದೆಯೇ ಇಂದಿರಾ ಮೊಬೈಲ್ ಕ್ಯಾಂಟೀನ್‌ನ ಟಿಟಿ ವಾಹನ ಕೂಡ ಕೆಟ್ಟು ನಿಂತು ವರ್ಷಗಳೇ ಕಳೆದಿವೆ, ಇಡೀ ವಾಹನ ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.