Home News Lishalliny Kanaran: ನಟಿ ಬಟ್ಟೆಯೊಳಗೆ ಕೈ ಹಾಕಿ ಅಸಭ್ಯ ವರ್ತನೆ ಮಾಡಿದ ಭಾರತೀಯ ಅರ್ಚಕ

Lishalliny Kanaran: ನಟಿ ಬಟ್ಟೆಯೊಳಗೆ ಕೈ ಹಾಕಿ ಅಸಭ್ಯ ವರ್ತನೆ ಮಾಡಿದ ಭಾರತೀಯ ಅರ್ಚಕ

Hindu neighbor gifts plot of land

Hindu neighbour gifts land to Muslim journalist

Lishalliny Kanaran: 2021 ರ ಮಿಸ್‌ ಗ್ರ್ಯಾಂಡ್‌ ಮಲೇಷ್ಯಾ ವಿಜೇತೆ ಲಿಶಲ್ಲಿನಿ ಕನರನ್‌ ಅವರು ತಮ್ಮ ಮೇಲೆ ಅರ್ಚಕರೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೌಲಾಲಂಪುರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಸೆಪಾಂಗ್‌ನಲ್ಲಿರುವ ಮಾರಿಯಮ್ಮನ್‌ ದೇವಾಲಯದಲ್ಲಿ ಈ ಘಟನೆ ನಡೆದಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಶನಿವಾರ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ. ಇದೀಗ ಭಾರತೀಯ ಅರ್ಚಕನಿಗಾಗಿ ಮಲೇಷಿಯಾ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

ಭಾರತದ ಪ್ರಜೆಯಾಗಿರುವ ಅರ್ಚಕರೊಬ್ಬರು ಭಾರತದ ಪವಿತ್ರ ನೀರು ಎಂದು ಹೇಳಿ ತನ್ನ ಜೊತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ನಟಿ ಆರೋಪ ಮಾಡಿದ್ದಾರೆ. ನಟಿ ಲಿಶಲ್ಲಿನಿ ಕನರನ್‌ ಅವರು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ನನ್ನ ತಾಯಿ ಭಾರತದಲ್ಲಿದ್ದ ಕಾರಣ ನಾನು ಒಬ್ಬಂಟಿಯಾಗಿ ದೇವಸ್ಥಾನಕ್ಕೆ ಹೋಗಿದ್ದೆ. ನಾನು ಇಲ್ಲಿಗೆ ಹೊಸಬಳಾಗಿರುವುದರಿಂದ ಪುರೋಹಿತರು ಹೇಳಿದ ಆಚರಣೆಗಳ ಮೂಲಕ ನನಗೆ ಹೇಳುತ್ತಿದ್ದರು. ಆದರೆ ಆ ದಿನ ನಾನು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವಾಗ ನನ್ನ ಬಳಿ ಬಂದ ಪುರೋಹಿತರು ನನಗೆ ಕಟ್ಟಲು ರಕ್ಷಣಾತ್ಮಕ ದಾರವಿದೆ ಹಾಗು ಪವಿತ್ರ ನೀರು ಇದೆ ಇದನ್ನು ಕೊಡುವುದಾಗಿ ಹೇಳಿದರು. ನಂತರ ತನ್ನನ್ನು ಭೇಟಿಯಾಗಲು ಹೇಳಿದ್ದು, ಒಂದು ಗಂಟೆ ಕಾದ ನಂತರ ತನ್ನ ಕಚೇರಿಗೆ ಬರಲು ಹೇಳಿ, ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.

ಜುಲೈ 4 ರಂದು ಅರ್ಚಕರ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ್ದಾರೆ. ಅರ್ಚಕರು ಈಗಾಗಲೇ ಪರಾರಿಯಾಗಿದ್ದಾರೆ. ದೇವಾಲಯದ ಆಡಳಿತ ಮಂಡಳಿ ತನಗೆ ಸಹಾಯ ಮಾಡುವ ಬದಲು ತಮ್ಮ ಹೆಸರನ್ನು ಉಳಿಸಿಕೊಳ್ಳಲು ಮಾಡಿರುವ ಕೃತ್ಯವನ್ನು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: 8th pay Commission: ಸರಕಾರಿ ಉದ್ಯೋಗಿ-ಪಿಂಚಣಿದಾರರಿಗೆ ಸಿಹಿ ಸುದ್ದಿ