Home News ಬಹುಪಾಲು ಭಾರತೀಯರು ಗೌಪ್ಯತೆಗೆ ಇರಿಸಿಕೊಂಡಿರುವ ಪಾಸ್‌ವರ್ಡ್‌ ಗಳು ಒಂದೇ ರೀತಿಯದ್ದಂತೆ !! | ನೀವು ಕೂಡ...


ಬಹುಪಾಲು ಭಾರತೀಯರು ಗೌಪ್ಯತೆಗೆ ಇರಿಸಿಕೊಂಡಿರುವ ಪಾಸ್‌ವರ್ಡ್‌ ಗಳು ಒಂದೇ ರೀತಿಯದ್ದಂತೆ !! | ನೀವು ಕೂಡ “123456” ಪಾಸ್‌ವರ್ಡ್‌ ಬಳಸುತ್ತಿದ್ದಲ್ಲಿ ಈ ವರದಿಯನ್ನೊಮ್ಮೆ ಓದಿ

Closeup of Password Box in Internet Browser

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ಲಾಕ್ ಡೌನ್ ನಿಂದ  ದೇಶ ಈಗಷ್ಟೇ ಹಂತಹಂತವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ದೇಶದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ನೀಡಲಾಗಿತ್ತು. ಆ ಸಮಯದಲ್ಲಿ ಅದೆಷ್ಟೋ ಕೆಲಸಗಳು ಡಿಜಟಲೀಕರಣಗೊಂಡವು.

ಕಂಪೆನಿಯ ಡಿಜಿಟಲ್‌ ದಾಖಲೆಗಳ ಗೌಪ್ಯತೆ ದೃಷ್ಟಿಯಿಂದ ಸೈಬರ್‌ ಭದ್ರತೆ ಕಲ್ಪಿಸಲಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಭಾರತೀಯರು ಪಾಸ್‌ವರ್ಡ್‌ ಅಳವಡಿಸಿಕೊಳ್ಳುವ ಬಗ್ಗೆ “ನಾರ್ಡ್‌ಪಾಸ್‌” ನಡೆಸಿರುವ ಸಂಶೋಧನೆಯಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಹೌದು, ಜಾಗತಿಕ ಪಾಸ್‌ವರ್ಡ್‌ ವ್ಯವಸ್ಥಾಪಕ ಸಂಸ್ಥೆ ನಾರ್ಡ್‌ಪಾಸ್‌, 50 ದೇಶಗಳ ಪಾಸ್‌ವರ್ಡ್‌ಗಳ ಬಗ್ಗೆ ಅಧ್ಯಯನ ನಡೆಸಿದೆ. ಅದರಲ್ಲಿ ಭಾರತೀಯರು ಅಳವಡಿಸಿಕೊಳ್ಳುವ ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದಂತೆ ಅಚ್ಚರಿದಾಯಕ ಅಂಶವನ್ನು ತೆರೆದಿಟ್ಟಿದೆ.

ಬಹುಪಾಲು ಭಾರತೀಯರು ಒಂದೇ ಬಗೆಯ ಪಾಸ್‌ವರ್ಡ್‌ ಬಳಸಿದ್ದಾರೆ. ಸಾಮಾನ್ಯವಾಗಿ 12345, 123456, 123456789, 12345678, india123, 1234567890, 1234567, abc123 ಹೀಗೆ ಒಂದೇ ರೀತಿಯಲ್ಲಿ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡಿಕೊಂಡಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

india123 ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಕ್ರ್ಯಾಕ್‌ ಮಾಡಬಹುದು ಎಂದು ನಾರ್ಡ್‌ಪಾಸ್‌ ಹೇಳಿದೆ. india123 ಪಾಸ್‌ವರ್ಡ್‌ ಅನ್ನು ಕ್ರ್ಯಾಕ್‌ ಮಾಡಲು 17 ನಿಮಿಷ ತೆಗೆದುಕೊಳ್ಳಲಾಯಿತು. ಈ ಸಮಯದ ಅವಧಿ ಕೇವಲ ಸೂಚಕವಾಗಿದ್ದರೂ, ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತ ಎಂಬುದನ್ನೂ ತಿಳಿಸುತ್ತದೆ ಎನ್ನಲಾಗಿದೆ.

ಪಾಸ್‌ವರ್ಡ್‌ಗಳು ದುರ್ಬಲವಾಗುತ್ತಿವೆ. ಸುರಕ್ಷತೆ ಪಾಸ್‌ವರ್ಡ್‌ಗಳನ್ನು ಜನರು ನಿರ್ವಹಿಸುತ್ತಿಲ್ಲ ಎಂದು ನಾರ್ಡ್‌ಪಾಸ್‌ ಸಿಇಒ ತಿಳಿಸಿದ್ದಾರೆ.

ಹ್ಯಾಕರ್‌ಗಳಿಗೆ ದುರ್ಬಲ ಪಾಸ್‌ವರ್ಡ್‌ಗಳೇ ವರದಾನ. ಇದನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಂಬೈ ಪೊಲೀಸರು ಸೈಬರ್‌ ಅಪರಾಧ ಜಾಗೃತಿ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.