Home News OTT: ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿದ ಅಶ್ಲೀಲತೆ; ಕೇಂದ್ರದ ಮಾರ್ಗಸೂಚಿ

OTT: ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿದ ಅಶ್ಲೀಲತೆ; ಕೇಂದ್ರದ ಮಾರ್ಗಸೂಚಿ

Hindu neighbor gifts plot of land

Hindu neighbour gifts land to Muslim journalist

Delhi: ಯೂಟ್ಯೂಬರ್‌ ಅಲಹಾಬಾದಿಯಾ ನೀಡಿದ ಪೋಷಕರ ಲೈಂಗಿಕತೆಯ ಆಕ್ಷೇಪಾರ್ಹ ಹಾಸ್ಯವು ಭಾರೀ ವಿವಾದಕ್ಕೆ ಕಾರಣವಾಗಿರುವ ನಡುವೆ ಇದೀಗ ಒಟಿಟಿಯಲ್ಲಿ ಪ್ರಸಾರವಾಗುವ ಅಶ್ಲೀಲ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಲು ಎಲ್ಲ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ಒಟಿಟಿ ವೇದಿಕೆಗಳಲ್ಲಿ ಕಾನೂನಡಿಯಲ್ಲಿ ನಿಷೇಧಿತ ಮತ್ತು ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಕಾರ್ಯಕ್ರಮ, ಕಂಟೆಂಟ್‌ಗಳ ಪ್ರಸಾರ ಮಾಡುವುದರ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ವಯಸ್ಸಿನ ಆಧಾರದ ಮೇಲೆ ವರ್ಗೀಕರಣ ಸೇರಿ, ಐಟಿ ನಿಯಮ 2021 ರ ಅಡಿಯಲ್ಲಿ ಸೂಚಿಸಿದ ನೀತಿ ಸಂಹಿತೆಗೆ ಅನುಗುಣವಾಗಿರಬೇಕು ಎಂದು ಒಟಿಟಿ ಫ್ಲಾಟ್‌ಫಾರ್ಮ್‌ಗಳು ಮತ್ತು ಸ್ವಯಂ ನಿಯಂತ್ರಕ ಸಂಸ್ಥೆಗಳಿಗೆ ಮಾರ್ಗಸೂಚಿಯಲ್ಲಿ ಹೇಳಿದೆ.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿ ಕಂಟೆಂಟ್‌ ಪ್ರಸಾರ ಮಾಡಿದ್ದಲ್ಲಿ ಸೂಕ್ತ ಕ್ರಮಕ್ಕೆ ಸಲಹೆ ನೀಡಲಾಗಿದೆ. ಅಶ್ಲೀಲತೆಗೆ ʼಎʼ ಸರ್ಟಿಫಿಕೇಟ್‌ ನೀಡಿ, ಸೂಕ್ತ ಎಚ್ಚರಿಕೆ ನೀಡಬೇಕು. ಮಕ್ಕಳ ಗ್ರಹಣಕ್ಕೆ ಅಂತಹ ಅಶ್ಲೀಲ ಕಂಟೆಂಟ್‌ಗಳು ಸಿಗಬಾರದು ಎಂದು ಕೂಡಾ ಹೇಳಿದೆ.