Home News Minors Pregnant: ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಳ – ಸದನದಲ್ಲಿ ಗಂಭೀರ ವಿಚಾರ ಪ್ರಸ್ತಾಪಿಸಿದ ಶಾಸಕ...

Minors Pregnant: ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಳ – ಸದನದಲ್ಲಿ ಗಂಭೀರ ವಿಚಾರ ಪ್ರಸ್ತಾಪಿಸಿದ ಶಾಸಕ ಸುರೇಶ್ ಬಾಬು

Hindu neighbor gifts plot of land

Hindu neighbour gifts land to Muslim journalist

Minors Pregnant: ಇಂದು ಸದನದಲ್ಲಿ ಗಂಭಿರ ವಿಚಾರವನ್ನು ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರಸ್ತಾಪಿಸಿದ್ದು, ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇತ್ತೀಚೆಗೆ ಬಾಲಗರ್ಭಿಣಿ ಪ್ರಕರಣ ಹೆಚ್ಚಾಗ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು ಎಂದು ಅವರು ಪ್ರಸ್ತಾಪಿಸಿದರು.

ಕಳೆದ ಮೂರು ವರ್ಷಗಳಲ್ಲಿ ಪ್ರಕರಣ ಹೆಚ್ಚಾಗಿದ್ದು, ಈ ಬಗ್ಗೆ ಸದನದಲ್ಲಿ ಅಂಕಿ ಅಂಶಗಳನ್ನು ಮುಂದಿಟ್ಟರು. ಅವರು ನೀಡಿರುವ ಅಂಕಿ ಅಂಶದ ಪ್ರಕಾರ 2022-23ರಲ್ಲಿ 405 ಪ್ರಕರಣಗಳು ಪತ್ತೆಯಾಗಿವೆ. ಇನ್ನು 2023-24ರಲ್ಲಿ 709 ಪ್ರಕರಣ ಬೆಳಕಿಗೆ ಬಂದಿದೆ. ಇನ್ನು 2024-25ರಲ್ಲಿ ಈವರೆಗೆ 685 ಪ್ರಕರಣಗಳ ವರದಿಯಾಗಿದೆ ಎಂದು ಬೆಚ್ಚಿ ಬೀಳುಸುವ ವರದಿಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿ, ಬಾಲಗರ್ಭಿಣಿ ಪ್ರಕರಣ ಹೆಚ್ಚಳ ಆಗಲು ಕಾರಣಗಳು ಏನೆಂದರೆ, ತ್ವರಿತಗತಿಯಲ್ಲಿ ಬದಲಾಗ್ತಿರುವ ಕೌಟುಂಬಿಕ ಸಮಸ್ಯೆ, ಅಪ್ರಾಪ್ತರಿಂದ ಸಾಮಾಜಿಕ ಜಾಲತಾಣಗಳ ಬಳಕೆ, ಬಾಲ್ಯವಿವಾಹದಿಂದ ಈ ಪ್ರಕರಣ ಹೆಚ್ಚಳವಾಗುತ್ತಿದೆ.

ಹದಿಹರಯದವರಲ್ಲಿ ಹೆಚ್ಚಿದ ಪ್ರೇಮಪ್ರಕರಣ ಇದಕ್ಕೆ ಮೊದಲ ಕಾರಣ, ಈಗಲೂ ಕೆಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿ ಇರುವುದು, ಹಾಗೆ ಬಾಲ್ಯವಿವಾಹದಿಂದಲೂ ಪ್ರಕರಣಗಳ ಹೆಚ್ಚಳವಾಗ್ತಿದೆ ಎಂದು ಸುರೇಶ್ ಬಾಬು ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. ಆದರೆ ಇದರ ತಡೆಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಅನ್ನುವ ಬಗ್ಗೆ ಹೆಬ್ಬಾಳ್ಕರ್‌ ಯಾವುದೇ ಮಾಹಿತಿ ನೀಡಲಿಲ್ಲ.

ಅಲ್ಲದೆ ಇದೇ ವೇಳೆ ಸೈಬರ್ ಕ್ರೈಂ ನಿಯಂತ್ರಣ ಮಾಡಬೇಕು ಎಂದು ಸರ್ಕಾರಕ್ಕೆ ಸುರೇಶ್ ಬಾಬು ಒತ್ತಾಯ ಮಾಡಿದರು.

Mangalore: ಮಂಗಳೂರು: ಬಿಜೆಪಿ ಮಹಿಳಾಮೋರ್ಚಾದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆದಂಬಾಡಿ ರಾಮಯ್ಯ ಗೌಡರ 

ಪ್ರತಿಮೆಯ ಸ್ವಚ್ಛತಾ ಮತ್ತು ಗೌರವಾರ್ಪಣೆ!