Home News ಗದಗದಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಕತ್ತು ಕಟ್ : ಚಿಕಿತ್ಸೆ ಫಲಿಸದೇ ʻಪ್ರಾಣ ಬಿಟ್ಟ...

ಗದಗದಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಕತ್ತು ಕಟ್ : ಚಿಕಿತ್ಸೆ ಫಲಿಸದೇ ʻಪ್ರಾಣ ಬಿಟ್ಟ ಯುವಕʼ

Hindu neighbor gifts plot of land

Hindu neighbour gifts land to Muslim journalist

Gadaga :ಮುಗಿಲೆತ್ತರಕ್ಕೆ ಹಾರುವ ರಂಗು ರಂಗಿನ ಗಾಳಿಪಟದ ಮಾಂಜಾ ದಾರದಿಂದಲೇ ಯುವಕನೊಬ್ಬ ಪ್ರಾಣವೇ ಬಿಟ್ಟ ದುರಂತ ಘಟನೆಯೊಂದು ಗದಗ(Gadaga) ನಗರದ ಡಂಬಳ ನಾಕಾ ಬಳಿ ನಡೆದಿದೆ.

 

ಜೂ.4 ಕಾರ ಹುಣ್ಣಿಮೆಯಂದು ಅವಳಿ ನಗರದಲ್ಲಿ ಗಾಳಿಪಟ ಹಾರಿಸಲಾಗಿತ್ತು ಈ ವೇಳೆ ಬೈಕ್ ಮೇಲೆ ಹೋಗುವ ಸಂದರ್ಭದಲ್ಲಿ ಮಾಂಜಾ ದಾರವೂ ಯುವಕ ಕುತ್ತಿಗೆ ಸಿಲುಕಿ ಕತ್ತನ್ನೆ ಸೀಳಿತ್ತು, ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಆದ್ರೆ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಯುವಕ ಚಿಕಿತ್ಸೆಯೂ ಫಲಿಸದೆ ಮೃತಪಟ್ಟಿದ್ದಾನೆ.

ಮೃತಪಟ್ಟ ಯುವಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾದ ರವಿ ಎಂದು ಗುರುತಿಸಲಾಗಿದೆ. ಈತ ಕಳೆದ ಹಲವು ವರ್ಷಗಳಿಂದ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು .

ಎಂದಿನಂತೆ ಜೂ.4 ರಂದು ಈತ ಬಾರ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿಯಲಾಗಿದೆ. ಆಕಾಶಕ್ಕೆ ಹಾರಬಲ್ಲ ಗಾಳಿಪಟದ ದಾರಕ್ಕೆ ಸಿಲುಕಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಮಗನನ್ನು ಕಂಡ ತಾಯಿಯ ಆಕ್ರಂಧನ ಮುಗಿಲುಮುಟ್ಟಿದೆ

ಇದನ್ನೂ ಓದಿ :ಗೃಹಲಕ್ಷ್ಮೀ ಯೋಜನೆಗಾಗಿ ಇತರ ಪಿಂಚಣಿಗಳನ್ನು ಕಡಿತ ಮಾಡಲ್ಲ