

ಕಡಬ: ಇಲಿ ಜ್ವರ ದಿಂದ ಕೋಡಿಂಬಾಳ ಗ್ರಾಮದ ಅರ್ಪಾಜೆ ನಿವಾಸಿ ಚಂದ್ರಶೇಖರ ರೈ(55ವ,) ಎಂಬವರು ಅ.17ರ ರಾತ್ರಿ ಮೃತಪಟ್ಟಿದ್ದಾರೆ.
ಅ.15ರಂದು ಅಸ್ವಸ್ಥಗೊಂಡ ಚಂದ್ರಶೇಖರ ಅವರನ್ನು ಕಡಬ ಆಸ್ಪತ್ರೆಗೆ ಕರೆತರಲಾಗಿದ್ದು ಬಳಿಕ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಅ.17ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ, ಚಂದ್ರಶೇಖರ್ ಅವರಿಗೆ ಇಲಿ ಜ್ವರ ಇರುವುದು ಪುತ್ತೂರು ಆಸ್ಪತ್ರೆಯಲ್ಲಿ ಖಚಿತಗೊಂಡಿತ್ತು ಎಂದು ಅವರ ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಪ್ರಶಾಂತ್, ಪ್ರದೀಪ್, ಪ್ರಜ್ವಳ್, ಪ್ರತಿಕ್ಷಾ ಅವರನ್ನು ಅಗಲಿದ್ದಾರೆ. ಮೃತರು ಕೃಷಿಕರಾಗಿದ್ದು ಜತೆಗೆ ಜಲಶೋಧನೆ ಮಾಡುವ ಕೆಲಸ ನಿರ್ವಹಿಸುತ್ತಿದ್ದರು.













