Home News Donald Trump: 43 ಕೋಟಿ ನೀಡಿದರೆ ಅಮೆರಿಕದ ʼಗೋಲ್ಡ್‌ ಕಾರ್ಡ್‌ʼ- ಟ್ರಂಪ್‌ ಆಫರ್ ‌

Donald Trump: 43 ಕೋಟಿ ನೀಡಿದರೆ ಅಮೆರಿಕದ ʼಗೋಲ್ಡ್‌ ಕಾರ್ಡ್‌ʼ- ಟ್ರಂಪ್‌ ಆಫರ್ ‌

Donald Trump

Hindu neighbor gifts plot of land

Hindu neighbour gifts land to Muslim journalist

Donald Trump: ಕಠಿಣ ವಲಸೆ ನೀತಿಯಿಂದ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಶ್ರೀಮಂತ ವಲಸಿಗರಿಗಾಗಿ ಹೊಸ ಯೋಜನೆಯನ್ನು ಜಾರಿ ತರಲು ಮುಂದಾಗಿದ್ದಾರೆ. ಗೋಲ್ಡ್‌ ಕಾರ್ಡ್‌ಗಳ ಮೂಲಕ ಶ್ರೀಮಂತ ವಲಸಿಗರಿಗೆ ಅಮೆರಿಕನ್‌ ಪೌರತ್ವ ಪಡೆಯುವುದನ್ನು ಸುಲಭಗೊಳಿಸುವ ತಂತ್ರವನ್ನು ಟ್ರಂಪ್‌ ಮಾಡುತ್ತಿದ್ದಾರೆ.

ಶ್ರೀಮಂತ ವಲಸಿಗರು ಐದು ಮಿಲಿಯನ್‌ ಡಾಲರ್‌ (43.54 ಕೋಟಿ) ಪಾವತಿ ಮಾಡಿ ಗೋಲ್ಡ್‌ ಕಾರ್ಡನ್ನು ಖರೀದಿ ಮಾಡಬಹುದು.

ಅಮೆರಿಕದಲ್ಲಿ (USA) ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ಮಾತ್ರ ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ EB-5 ವೀಸಾ ಯೋಜನೆಯನ್ನು ಗೋಲ್ಡ್‌ ಕಾರ್ಡ್‌ನೊಂದಿಗೆ ಬದಲಾಯಿಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ.