Home News IAS officer Niaz Khan: ಮುಸ್ಲಿಮರು ಹಸುಗಳನ್ನು ಸಾಕಿ, ಸಸ್ಯಾಹಾರಿಗಳಾಗಿ, ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ:...

IAS officer Niaz Khan: ಮುಸ್ಲಿಮರು ಹಸುಗಳನ್ನು ಸಾಕಿ, ಸಸ್ಯಾಹಾರಿಗಳಾಗಿ, ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: IAS ಅಧಿಕಾರಿ ನಿಯಾಜ್​ ಖಾನ್​ !

IAS officer Niaz Khan

Hindu neighbor gifts plot of land

Hindu neighbour gifts land to Muslim journalist

IAS officer Niaz Khan ಭೋಪಾಲ್: ನಮ್ಮ ಭಾರತ ದೇಶದಲ್ಲಿ ಮತಾಂತರ ನಡೆಯಲು ಬಾಲಿವುಡ್​ ಮುಖ್ಯ ಕಾರಣ ಎಂದು ಮಧ್ಯಪ್ರದೇಶದ ಐಎಎಸ್​ ಅಧಿಕಾರಿ ನಿಯಾಜ್​ ಖಾನ್​ ಸ್ಫೋಟಕ ಹೇಳಿಕೆ ನೀಡಿ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ದಾಮೋದ ಗಂಗಾ ಜಮುನಾ ಶಾಲೆಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರದ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ಘಟನೆಗಳಿಗೆ ಬಾಲಿವುಡ್​ ನೇರ ಕಾರಣ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಮತಾಂತರ ಸರಿಯಲ್ಲ, ಇದು ಆರಂಭವಾಗಿದ್ದು ಬಾಲಿವುಡ್​ನಿಂದ. ದೊಡ್ಡ ಸಿನಿಮಾ ತಾರೆಯರು ಹಿಂದೂಗಳನ್ನು ಈ ಹಿಂದೆ ಮುಸಲ್ಮಾನರಾಗಿಸಿದ್ದು, ಇಂದಿಗೂ ಅದು ಅಲ್ಲಿ ನಡೆಯುತ್ತಿದೆ. ಮತಾಂತರ ಮಾಡುವುದು ದೊಡ್ಡ ತಪ್ಪು. ಏಕೆಂದರೆ ನಾವು ಒಂದು ಧರ್ಮವನ್ನು ಬೇರೆ ಎಲ್ಲದ್ದಕ್ಕಿಂತ ಮಿಗಿಲು ಎಂದು ಪರಿಗಣಿಸಿರುತ್ತೇವೆ ಎಂದಿದ್ದಾರೆ ಐಎಎಸ್​ ಅಧಿಕಾರಿ ನಿಯಾಜ್​ ಖಾನ್​.

ಅಷ್ಟೇ ಅಲ್ಲದೆ, ಮುಸಲ್ಮಾನರ ಕುರಿತು ಟ್ವೀಟ್​ ಮಾಡಿರುವ ನಿಯಾಜ್​ ಖಾನ್​ (IAS officer Niaz Khan), ” ಭಾರತದಲ್ಲಿ ಮುಸ್ಲಿಮರು ಹಸುಗಳನ್ನು ಸಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಅವರ ಆಹಾರ ಪದ್ದತಿಯಲ್ಲಿ ಸಸ್ಯಹಾರವನ್ನು ಅಳವಡಿಸಿಕೊಳ್ಳಬೇಕು. ಬ್ರಾಹ್ಮಣರ ಜೊತೆ ಮುಸ್ಲಿಮರು ಉತ್ತಮ ಭಾಂದವ್ಯವನ್ನು ಹೊಂದಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

 

मेरे नवीन विचारों से लोग यह अनुमान लगाते हैं कि मैं भी AGENDAWADI हूं। दुर्भाग्य है कि लोग सच नहीं समझते। मैं हमेशा इंसानियत के साथ रहता हूं। अन्याय का साथ देने से बेहतर मृत्यु होगी। मुस्लिम भाई मुझ पर शक ना करें। #ब्राह्मणों के प्रति मेरा लगाव उनकी योग्यता के कारण है। समझें इसे।

— Niyaz Khan (@saifasa) June 9, 2023

 

ಜತೆಗೆ ಲವ್ ಜಿಹಾದ್ ಬಗ್ಗೆ ಕೂಡಾ ಅವರು ಮಾತಾಡಿದ್ದಾರೆ. “ನಮ್ಮದು ಪ್ರಜಾಸತ್ತಾತ್ಮಕ ದೇಶ, ಇಲ್ಲಿ ಎಲ್ಲ ಧರ್ಮಗಳೂ ಸಮಾನ. ಒಂದು ವೇಳೆ ಅನ್ಯ ಧರ್ಮದವರನ್ನು ಪ್ರೀತಿಸಿ ಮದುವೆಯಾದಾಗ ಅಂತಹ ಸಂದರ್ಭದಲ್ಲಿ ಮತಾಂತರವಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಇಬ್ಬರ ನಡುವೆ ಪ್ರೀತಿಯಿದ್ದು, ಅವರು ತಮ್ಮತಮ್ಮ ಧರ್ಮವನ್ನು ಅನುಸರಿಸಿದರೆ ಸಾಕು, ಅದಕ್ಕೆ ಧಾರ್ಮಿಕ ಮತಾಂತರ ಸೂಕ್ತವಲ್ಲ ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 

मुस्लिम भाई भी गौ रक्षक बनें, धर्म परिवर्तन का विरोध करें, किसी का धर्म ना बदलवाएं। जबरन धर्म बदलवाना इस्लाम में प्रतिबंधित है। अगर शाकाहार अपना सकें तो यह एक बेहतरीन प्रयास होगा। यद्यपि शाकाहारी बनने को बाध्य नही किया जा सकता। हर मुस्लिम भाई #ब्राह्मणों से मधुर संबंध रखें।

— Niyaz Khan (@saifasa) June 8, 2023

 

ಈ ನಿಯಾಜ್ ಖಾನ್ ಯಾರು ಗೊತ್ತೇ ?:
ನಿಯಾಜ್ ಖಾನ್ ಮಧ್ಯಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ. ಅವರು ಹಲವು ಮುಸ್ಲಿಂ ಸಂಘಟನೆಗಳು ಮುಸ್ಲಿಂ ಧರ್ಮದ ಹೆಸರನ್ನು ಹಾಳು ಮಾಡಿವೆ ಎಂದಿದ್ದಾರೆ. ನಿಯಾಜ್ ಖಾನ್ ಅವರು 8 ಪುಸ್ತಕಗಳನ್ನು ಬರೆದಿದ್ದು, ಇತ್ತೀಚಿಗೆ ಅವರು ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ಹೇಳಿದ್ದಾನೆ ಹೇಳಿಕೆ ವಿವಾದ ಸೃಷ್ಟಿ ಮಾಡಿತ್ತು. ನಿಯಾಜ್ ಖಾನ್ ಬ್ರಾಹ್ಮಣರಿಂದ ತುಂಬಾ ಪ್ರೇರಿತರಾಗಿದ್ದಾರೆ. ಬ್ರಾಹ್ಮಣರು ಅತ್ಯಂತ ಬುದ್ಧಿವಂತರು ಎಂದು ಅವರು ಖಚಿತವಾಗಿ ನಂಬುತ್ತಿದ್ದಾರೆ. ಬ್ರಾಹ್ಮಣರು ಎಷ್ಟು ಬುದ್ಧಿವಂತರೆಂದರೆ, ಅವರನ್ನು ಎಲ್ಲಾ ಕ್ಷೇತ್ರಗಳಲ್ಲೂ ನಾಯಕರನ್ನಾಗಿ ಮಾಡಿದರೆ ಆಗ ದೇಶ ಮುನ್ನಡೆಯುತ್ತದೆ ಎಂದು ನಿಯಾಜ್ ಖಾನ್ ಹೇಳುತ್ತಾರೆ.

 

ಇದನ್ನು ಓದಿ: Hajj Pilgrimage: ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ವ್ಯಕ್ತಿ: ಒಟ್ಟು 370 ದಿನ, 8640 ಕಿ.ಮೀ. ಸುದೀರ್ಘ ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿದ ಕೇರಳದ ಯುವಕ