Home News IAS intresting Question: ಒಂದು ದಿನ ಬೆಳಿಗ್ಗೆ ಎದ್ದಾಗ ನೀವು ಗರ್ಭಿಣಿ ಎಂದು ಗೊತ್ತಾದ್ರೆ ಏನು...

IAS intresting Question: ಒಂದು ದಿನ ಬೆಳಿಗ್ಗೆ ಎದ್ದಾಗ ನೀವು ಗರ್ಭಿಣಿ ಎಂದು ಗೊತ್ತಾದ್ರೆ ಏನು ಮಾಡ್ತೀರಿ ? IAS ಹುಡ್ಗಿ ಕೊಟ್ಳು ನೋಡಿ ಬೊಂಬಾಟ್ ಉತ್ತರ !

IAS intresting Questions
Photo: Shikshanews for representation only

Hindu neighbor gifts plot of land

Hindu neighbour gifts land to Muslim journalist

IAS intresting Questions: IAS ಅನ್ನುವುದು ಭಾರತದ ಅತ್ಯಂತ ಪ್ರೆಸ್ಟೀಜಿಯಸ್ ಸಂಸ್ಥೆ ಮತ್ತು ಉದ್ಯೋಗ. ಕೆಲವೇ ಸಾವಿರ ಜನರು ಮಾತ್ರ ಈ ಉದ್ಯೋಗವನ್ನು ಪಡೆಯಲು ಶಕ್ತರಾಗುತ್ತಾರೆ. ಲಿಖಿತ ಪರೀಕ್ಷೆ ನಂತರ ಸಂದರ್ಶನ ಮುಗಿಸಿ ಅಲ್ಲಿಯೂ ವಿಜಯಶಾಲಿ ಯಾದರೆ ಆತ ಅಥವಾ ಆಕೆ ಐಎಎಸ್ ಅಧಿಕಾರಿಯಾಗಬಹುದು. ನಾವು ಇವತ್ತು ಇಲ್ಲಿ ಮೌಖಿಕ ಪರೀಕ್ಷೆಗಳಲ್ಲಿ ಕೇಳಬಹುದಾದ ಮತ್ತು ಅತ್ಯಂತ ಜನಪ್ರಿಯವಾಗಿರುವ ಕೆಲವು ಐಎಎಸ್ ಪರೀಕ್ಷಾ ಪ್ರಶ್ನೆಗಳನ್ನು(IAS intresting Questions) ಮತ್ತು ಅವುಗಳಿಗೆ ಸಮರ್ಪಕ ಉತ್ತರಗಳನ್ನು ಇಲ್ಲಿ ಕೊಟ್ಟಿದ್ದೇವೆ. ಬುದ್ದಿಯನ್ನು ಹರಿತವಾದ ಆಯುಧಗಳ ಥರ ಯಾವ ರೀತಿ ಬಳಸಬಹುದು ಎನ್ನುವುದನ್ನು ತೋರಿಸಬಲ್ಲ ಕೆಲ ಉದಾಹರಣೆ ಇಲ್ಲಿದೆ ನೋಡಿ.

ಪ್ರಶ್ನೆ 1: ಒಂದು ಬೆಳಿಗ್ಗೆ ನೀವು ಎದ್ದಾಗ ನೀವು ಗರ್ಭಿಣಿ ಎಂದು ಕಂಡುಬಂದರೆ ಏನು ಮಾಡ್ತೀರಿ ? ಎಂದು ಐಎಎಸ್ ಪರೀಕ್ಷಾ ಹುಡುಗಿಯನ್ನು ಒಂದು ಬಾರಿ ಮೌಖಿಕ ಸಂದರ್ಶನದಲ್ಲಿ ಕೇಳಲಾಗುತ್ತದೆ. ನಿಜಕ್ಕೂ ಹುಡುಗಿಯರನ್ನು ಇಂತಹ ಪ್ರಶ್ನೆ ಕೇಳಿದರೆ ಆಕೆ ತಬ್ಬಿಬ್ಬಾಗುವುದು ಸಹಜ. ಆದರೆ ಅತ್ಯಂತ ಆತ್ಮವಿಶ್ವಾಸದಿಂದ ಕೂಡಿದ ಬುದ್ಧಿವಂತ ಹುಡುಗಿ ಹೇಳಿದ ಉತ್ತರ ಎಲ್ಲರನ್ನು ನಿಬ್ಬೆರಗಾಗಿಸಿದೆ.
ಉತ್ತರ: ಹಾಗೊಂದು ವೇಳೆ ನಾನು ಗರ್ಭಿಣಿ ಸುದ್ದಿ ತಿಳಿದು ಬಂದರೆ ನಾನು ತುಂಬಾ ಖುಷಿಯಾಗುತ್ತೇನೆ. ನಾನು ತುಂಬಾ ಉತ್ಸುಕನಾಗುತ್ತೇನೆ ಮತ್ತು ಆ ದಿನ ರಜೆ ಹಾಕಿ ನಾನು ಮತ್ತು ನನ್ನ ಪತಿ ಆ ಸಂಭ್ರಮವನ್ನು ಆಚರಿಸಲು ಹೊರಡುತ್ತೇನೆ ಎಂದಿದ್ದಾಳೆ.

ಪ್ರಶ್ನೆ 2: ಬುಧವಾರ, ಶುಕ್ರವಾರ ಅಥವಾ ಭಾನುವಾರ ಪದಗಳನ್ನು ಬಳಸದೆ ನೀವು ಸತತ ಮೂರು ದಿನಗಳನ್ನು ಹೆಸರಿಸಬಹುದೇ ? ಎನ್ನುವುದು ಇನ್ನೊಂದು ಪ್ರಶ್ನೆ.
ಉತ್ತರ: ಖಂಡಿತವಾಗಿ. ಅದು ನಿನ್ನೆ, ಇಂದು ಮತ್ತು ನಾಳೆ.

ಪ್ರಶ್ನೆ 3: ಇಬ್ಬರು ಅವಳಿಗಳು ಇರ್ತಾರೆ. ಸಿದ್ರಾಮಯ್ಯ ಮತ್ತು ಶಿವಕುಮಾರ್ ಅಂತ ಇಟ್ಕೊಳ್ಳಿ ಅವರ ಹೆಸರು. ಅವರು ಮೇನಲ್ಲಿ ಜನಿಸಿದರು. ಆದರೆ ಅವರ ಜನ್ಮದಿನವು ಜೂನ್‌ನಲ್ಲಿ, ಇದು ಹೇಗೆ ಸಾಧ್ಯ? ಎನ್ನುವ ಟ್ರಿಕ್ಕಿ ಪ್ರಶ್ನೆ ಕೇಳಲಾಯಿತು. ಆಗ ವಿದ್ಯಾರ್ಥಿಯ ಬಾಯಿಂದ ತಟ್ಟನೆ ಮೂಡಿ ಬಂತು ಈ ಉತ್ತರ.
ಉತ್ತರ: ಮೇ ಎಂಬುದು ಊರಿನ ಹೆಸರು. ಮೇ ಎಂಬ ಊರಿನಲ್ಲಿ, ಅವರು ಜೂನ್ ತಿಂಗಳಿನಲ್ಲಿ ಹುಟ್ಟಿದ್ದಾರೆ. ಸಿಂಪಲ್ !

ಪ್ರಶ್ನೆ 4: ಓರ್ವ ವ್ಯಕ್ತಿ 25 ನೇ ಮಹಡಿಯ ಕಿಟಕಿಯ ಕನ್ನಡಿಯ ಮೇಲೆ ಅವನ ಪ್ರತಿಬಿಂಬವನ್ನು ನೋಡಿ, ಅದೇನಾಯಿತೋ ಸಡನ್ನಾಗಿ ಪ್ರಚೋದನೆಯಿಂದ ಪ್ರೇರೇಪಿಸಲ್ಪಟ್ಟ ಆತ ಪಕ್ಕದಲ್ಲಿದ್ದ ಇನ್ನೊಂದು ಬದಿಯಲ್ಲಿರುವ ಕಿಟಕಿಯ ಮೂಲಕ ಒಂದು ನೆಗೆತವನ್ನು ಮಾಡುತ್ತಾನೆ. ಆದರೂ ಆತನಿಗೆ ಒಂದು ಸಣ್ಣ ಏಟು ಕೂಡಾ ಆಗಲಿಲ್ಲ. ನೆನಪಿಡಿ: ಅವನು ಪ್ಯಾರಾಚೂಟ್ ಅನ್ನು ಕೂಡಾ ಬಳಸಿರಲಿಲ್ಲ. ಇದು ಹೇಗೆ ಸಾಧ್ಯ ಆಯಿತು?
ಉತ್ತರ: ಆತ ಅಪಾರ್ಟ್ಮೆಂಟ್ ನ ಕಿಟಕಿ ಕ್ಲೀನರ್. ಮೊದಲು ಆತ ಸೇಫ್ಟಿ ಬೆಲ್ಟ್ ಹಾಕಿಕೊಂಡು 25ನೇ ಮಹಡಿಯಲ್ಲಿ ಹೊರಗೆ ಇದ್ದ. ಆತ ಕಿಟಕಿಗಳನ್ನು ಸ್ವಚ್ಛಗೊಳಿಸಿ ಸುಸ್ತಾಗಿ ಕೊನೆಗೆ ಅಲ್ಲಿದ್ದ ಕಿಟಕಿಯೊಂದರ ಮುಖಾಂತರ ಒಳಕ್ಕೆ ಕಟ್ಟಡದೊಳಗೆ ಜಿಗಿದಿದ್ದಾನೆ. ಹೊರಗಿನಿಂದ ಒಳಕ್ಕೆ ಜಿಗಿದಾಗ ಏನು ಆಗಲು ಸಾಧ್ಯ ?

ಇದನ್ನೂ ಓದಿ: ಕ್ರೀಡಾಕೂಟದಲ್ಲಿ ಗೆದ್ದು ಬಹುಮಾನ ಸ್ವೀಕರಿಸುವ ಮುನ್ನವೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವು