Home News ಟ್ರಂಪ್ ಗೆNobel Prize: ನನಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಬರಲೇಬೇಕು: ಡೊನಾಲ್ಡ್ ಟ್ರಂಪ್ ರದ್ದು ಒಂದೇ...

ಟ್ರಂಪ್ ಗೆNobel Prize: ನನಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಬರಲೇಬೇಕು: ಡೊನಾಲ್ಡ್ ಟ್ರಂಪ್ ರದ್ದು ಒಂದೇ ರಚ್ಚೆ!

Donald Trump

Hindu neighbor gifts plot of land

Hindu neighbour gifts land to Muslim journalist

ನ್ಯೂಯಾರ್ಕ್: ನಾನು ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದು, ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಲೇಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಚ್ಚೆ ಹಿಡಿದಿದ್ದಾರೆ.

ನಾನು ಭಾರತ ಮತ್ತು ಪಾಕಿಸ್ತಾನ ಮಧ್ಟದ ಸಂಘರ್ಷವನ್ನು ವ್ಯಾಪಾರ ಮಾತುಕತೆ ಮೂಲಕ ಪರಿಹರಿಸಿದ್ದೇನೆ. ನಾನು ಒಟ್ಟು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಈ ಕಾರ್ಯಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಬೇಕು ಎಂದಿದ್ದಾರೆ ಟ್ರಂಪ್. ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಗೌರವದ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ.

“ನಾವು ಈಗ ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದು, ಹಲವು ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ವಿಶ್ವ ಮಟ್ಟದಲ್ಲಿ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ: ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಕಾಂಬೋಡಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಿದ್ದೇವೆ” ಎಂದು ಟ್ರಂಪ್ ಶನಿವಾರ ನಡೆದ ಅಮೆರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಫೌಂಡರ್ ಡಿನ್ನರ್‌ನಲ್ಲಿ ಹೇಳಿದರು.

“ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಅದರ ಬಗ್ಗೆ ಯೋಚಿಸಿ. ನಾನು ಅದನ್ನು ಹೇಗೆ ನಿಲ್ಲಿಸಿದೆ ಎಂದು ನಿಮಗೆ ತಿಳಿದಿದೆ. ಅವರು ನಮ್ಮೊಂದಿಗೆ ವ್ಯಾಪಾರ ಮಾಡಲು ಬಯಸುತ್ತಾರೆ. ನನಗೆ ಇಬ್ಬರೂ ನಾಯಕರ ಬಗ್ಗೆ ಅಪಾರ ಗೌರವವಿದೆ. ಯುದ್ದ ನಿಲ್ಲಿಸಿದ್ದು, ಅವುಗಳಲ್ಲಿ ಶೇ. 60 ರಷ್ಟು ವ್ಯಾಪಾರದ ಕಾರಣದಿಂದ ನಿಲ್ಲಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ಪರಮಾಣು ಶಕ್ತಿಗಳನ್ನು ಹೊಂದಿವೆ. ನೀವು ಯುದ್ಧ ಮುಂದುವರೆಸಿದರೆ ನಿಮ್ಮೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಮಾಡುವುದಿಲ್ಲ ಎಂದು ಭಾರತಕ್ಕೆ ಹೇಳುವ ಮೂಲಕ ಯುದ್ಧ ನಿಲ್ಲಿಸಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಿದರೆ ನನಗೆ ನೊಬೆಲ್ ಪ್ರಶಸ್ತಿ ಬರಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:GST Reforms: ಸೆಪ್ಟೆಂಬರ್ 22 ರ ನಂತರವೂ ನಿಮಗೆ ಅಗ್ಗದ ಸರಕುಗಳು ಸಿಗದಿದ್ದರೆ, ದೂರು ದಾಖಲಿಸಿ

ನಾನು ಪುಟಿನ್ ಉತ್ತಮ ಸಂಬಂಧ ಹೊಂದಿದ್ದರಿಂದ ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟನ್ನು ಸುಲಭವಾಗಿ ಪರಿಹರಿಸಬಹುದು ಅಂದುಕೊಂಡಿದ್ದೆ. ಆದರೆ, ಪುಟಿನ್ ರಿಂದ ನಿರಾಸೆಗೊಂಡಿದ್ದೇನೆ. ಆದರೆ ನಾನು ಅದನ್ನು ಮಾಡಿಯೇ ಮಾಡುತ್ತೇನೆ. ಒಂದು ದಾರಿ ಇಲ್ಲದೆ ಹೋದರೆ ಮತ್ತೊಂದು ದಾರಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಅವರು ಟ್ರಂಪ್ ಹೇಳಿದರು.