Home News Sujatha Bhat: ‘ನಾನು ಎಲ್ಲೂ ನಾಪತ್ತೆಯಾಗಿಲ್ಲ, ಎಲ್ಲಿರಬೇಕು ಅಲ್ಲಿದ್ದೇನೆ’ – ಅನನ್ಯ ಭಟ್ ತಾಯಿ ಸುಜಾತ...

Sujatha Bhat: ‘ನಾನು ಎಲ್ಲೂ ನಾಪತ್ತೆಯಾಗಿಲ್ಲ, ಎಲ್ಲಿರಬೇಕು ಅಲ್ಲಿದ್ದೇನೆ’ – ಅನನ್ಯ ಭಟ್ ತಾಯಿ ಸುಜಾತ ಭಟ್ ಸ್ಪಷ್ಟನೆ!!

Hindu neighbor gifts plot of land

Hindu neighbour gifts land to Muslim journalist

Sujatha Bhat: ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣದ ನಡುವೆ ಸುಮಾರು 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅನನ್ಯ ಭಟ್ ಪ್ರಕರಣ ಕೂಡ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದೀಗ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರು ಪೊಲೀಸರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ ಎಂದು ಕೆಲ ಮಾಧ್ಯಮದವರು ವರದಿ ಮಾಡಿದ್ದರು. ಇದರ ಬೆನ್ನಲ್ಲೇ ಸುಜಾತ ಭಟ್ಟವರು ವಿಡಿಯೋ ಮಾಡಿ ನಾನು ಎಲ್ಲೋ ನಾಪತ್ತೆಯಾಗಿಲ್ಲ, ಎಲ್ಲಿರಬೇಕೋ ಅಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತಾಗಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು ಕೆಲವು ಮಾಧ್ಯಮಗಳು ಸುಜಾತ ಭಟ್ ನಾಪತ್ತೆಯಾಗಿದ್ದಾರೆ ಎಂದು ವರದಿ ಮಾಡುತ್ತಿವೆ. ಆದರೆ ನಾನು ಎಲ್ಲಿಗೂ ಹೋಗಿಲ್ಲ. ಇದೆಲ್ಲ ಸುಳ್ಳು. ನಾನು ಕೇಳುತ್ತಿರುವುದು ನನ್ನ ಮಗಳ ಅಸ್ತಿಪಂಜರವನ್ನುಷ್ಟೇ. ಅದು ಸಿಕ್ಕಿದರೆ ಕೊಡಿ. ಡಿಎನ್ಎ ಮ್ಯಾಚ್ ಆಗಿ ಅದು ನನಗೆ ಸಿಕ್ಕರೆ ನಾನು ಹಿಂದೂ ಸಂಪ್ರದಾಯದಂತೆ ಸಂಸ್ಕಾರ ಮಾಡುತ್ತೇನೆ.

ಅಲ್ಲದೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಅವರು ಕಿಡಿ ಕಾರಿತ್ತು ಜನರ ಮೈಂಡ್ ಡೈವರ್ಟ್ ಮಾಡಿಲಿಕ್ಕೆ ಕೆಲವು ಮಾಧ್ಯಮಗಳು ಈ ರೀತಿ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Dharmasthala : ಧರ್ಮಸ್ಥಳ ಕುರಿತು ಅಪಪ್ರಚಾರ ಆರೋಪ- ರಾಜ್ಯಾದ್ಯಂತ ಸಿಡಿದೆದ್ದ ಭಕ್ತರು, ಭಾರೀ ಪ್ರತಿಭಟನೆ!!