Home News Vijay Malya: ಆ ಒಂದೇ ಒಂದು ಕಾರಣಕ್ಕಾಗಿ ಕೊಹ್ಲಿಯನ್ನು RCB ತಂಡಕ್ಕೆ ಸೇರಿಸಿಕೊಂಡೆ- ಶಾಕಿಂಗ್ ಸತ್ಯ...

Vijay Malya: ಆ ಒಂದೇ ಒಂದು ಕಾರಣಕ್ಕಾಗಿ ಕೊಹ್ಲಿಯನ್ನು RCB ತಂಡಕ್ಕೆ ಸೇರಿಸಿಕೊಂಡೆ- ಶಾಕಿಂಗ್ ಸತ್ಯ ಬಿಚ್ಚಿಟ್ಟ ವಿಜಯ ಮಲ್ಯ

Hindu neighbor gifts plot of land

Hindu neighbour gifts land to Muslim journalist

Vijay Malya: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಕರ್ನಾಟಕದ ಜನತೆಯನ್ನು ಶೋಕ ಸಾಗರದಲ್ಲಿ. ಆರ್‌ಸಿಬಿ 18 ವರ್ಷಗಳ ಬಳಿಕ ಗೆದ್ದಿತು ಎಂದು ಸಂಭ್ರಮಿಸಬೇಕು ಅಥವಾ ಆರ್‌ಸಿಬಿ ಅಭಿಮಾನಿಗಳ. ದುರಂತ ಸಾವನ್ನು ಕಂಡು ದುಃಖ ಪಡಬೇಕೋ ಎಂದು ಒಂದೂ ತಿಳಿಯದಾಗಿದೆ. ಇನ್ನು ಇದರ ಹೊರತಾಗಿಯೂ ಕೂಡ ಅನೇಕ ಮಾಧ್ಯಮಗಳು ಆರ್‌ಸಿಬಿ ತಂಡದ ಸಂಭ್ರಮವನ್ನು ಪ್ರಕಟಿಸುತ್ತೇವೆ. ಜೊತೆಗೆ ಸಂದರ್ಶನಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಆರ್‌ಸಿಬಿ ತಂಡದ ಮಾಜಿ ಮುಖ್ಯಸ್ಥರಾಗಿದ್ದ ವಿಜಯ್ ಮಲ್ಯ ಅವರನ್ನು ಕೂಡ ಮಾಧ್ಯಮಗಳು ಮಾತನಾಡಿಸಿವೆ.

ಸಂದರ್ಶನದಲ್ಲಿ ಮಾತನಾಡಿದ ವಿಜಯ್ ಮಲ್ಯ ಅವರು ತಾನೇಕೆ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಆ ಒಂದೇ ಒಂದು ಕಾರಣಕ್ಕಾಗಿ ನಾನು ಕೊಹ್ಲಿಯನ್ನು ಸೆಲೆಕ್ಟ್ ಮಾಡಿದ ಎಂದು ಹೇಳಿದ್ದಾರೆ.

ಈ ಕುರಿತಾಗಿ ಮಾತನಾಡಿದ ವಿಜಯ್ ಮಲ್ಯ ಅವರು “ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದು ನಾನೇ. ನಾನು ಆಯ್ಕೆಗಾಗಿ ಕುಳಿತಿದ್ದೆ, ಮತ್ತು ನನ್ನ ಸರದಿ ಬಂದ ತಕ್ಷಣ, ನಾನು ವಿರಾಟ್ ಅವರನ್ನು ತಕ್ಷಣ ಆಯ್ಕೆ ಮಾಡಿದೆ. ಸ್ಪಷ್ಟವಾಗಿ, ಭಾರತದ ಅಂಡರ್ -19 ತಂಡದೊಂದಿಗೆ ಅವರ ಪ್ರದರ್ಶನವು ಪ್ರಭಾವಶಾಲಿ ಅಂಶವಾಗಿತ್ತು. ಆದ್ದರಿಂದ, ಅವರು ಆರ್‌ಸಿಬಿ ನಾಯಕನಾಗಲು ನೈಸರ್ಗಿಕ ಆಯ್ಕೆಯಾಗಿದ್ದರು. ಇದರ ಹೊರತಾಗಿ, ತಂಡದ ಮಾಜಿ ಮಾಲೀಕರು, ಪ್ರತಿಯೊಂದು ಫ್ರಾಂಚೈಸಿಯೂ ಹಾಲ್ ಆಫ್ ಫೇಮ್ ಅನ್ನು ರಚಿಸುವುದನ್ನು ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. ಆರ್‌ಸಿಬಿಗೆ ಸಂಬಂಧಿಸಿದಂತೆ, ಈ ಫ್ರಾಂಚೈಸಿಗೆ ಅಸಾಧಾರಣ ಫಲಿತಾಂಶಗಳನ್ನು ನೀಡಿದ ಆಟಗಾರರಿದ್ದಾರೆ. ನನ್ನ ಅಭಿಪ್ರಾಯದಲ್ಲಿ, ವಿರಾಟ್, ಎಬಿ ಮತ್ತು ಗೇಲ್ ಹಾಲ್ ಆಫ್ ಫೇಮರ್‌ಗಳು” ಎಂದಿದ್ದಾರೆ.