Home News Viral Photo: ಬೀಚ್ ನಲ್ಲಿ ಅಮಿತ್ ಶಾ ಪುತ್ರ, ICC ಅಧ್ಯಕ್ಷ ಜಯ್ ಶಾ ಜೊತೆ...

Viral Photo: ಬೀಚ್ ನಲ್ಲಿ ಅಮಿತ್ ಶಾ ಪುತ್ರ, ICC ಅಧ್ಯಕ್ಷ ಜಯ್ ಶಾ ಜೊತೆ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ರೋಮ್ಯಾನ್ಸ್..?! ಫೋಟೋಸ್ ವೈರಲ್

Hindu neighbor gifts plot of land

Hindu neighbour gifts land to Muslim journalist

Viral Photo : ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮತ್ತು ಐಸಿಸಿ ಅಧ್ಯಕ್ಷ ಜೈ ಶಾ ಬೀಚ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋಗಳು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಯಾಗುತ್ತಿದೆ. ಆದರೆ ಇದರ ಅಸಲಿ ವಿಚಾರವೇ ಬೇರೆ ಇದೆ.

ಯಸ್, ಐಸಿಸಿ ಅಧ್ಯಕ್ಷ ಜಯ ಷಾ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮೂಲಕ ಡಿಫೇಕ್ ವಿಡಿಯೋ ಎಡಿಟ್ ಕಿಡಿಗೇಡಿಗಳ ವಕ್ರ ದೃಷ್ಟಿ ಇವರ ಮೇಲೂ ಬಿದ್ದಂತಾಗಿದೆ. ಹೌದು, ಜಯ ಷಾ ಮತ್ತು ಕಾವ್ಯಾ ಮಾರನ್ ಎಐ ಕಿಡಿಗೇಡಿಗಳ ವಕ್ರ ದೃಷ್ಟಿಗೆ ಗುರಿಯಾಗಿದ್ದಾರೆ. ಜಯ ಷಾ ಜೊತೆ ಕಾವ್ಯಾ ಮಾರನ್​ ರೊಮ್ಯಾನ್ಸ್ ಮಾಡುತ್ತಿರುವಂತೆ ನಕಲಿ ಫೋಟೋಗಳನ್ನು ಕ್ರಿಯೇಟ್ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಇನ್ನು ಈ ಫೋಟೋಗಳನ್ನು ನೋಡಿದ ಟೀಮ್​ ಇಂಡಿಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಫೋಟೋಗಳನ್ನು ಡಿಲೀಟ್ ಮಾಡಬೇಕು ಮತ್ತು ನಕಲಿ ಫೋಟೋಗಳನ್ನು ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಎಐ, ಡೀಪ್‌ಫೇಕ್ ವಿಡಿಯೋಗಳನ್ನು ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.

ಅಂದಹಾಗೆ ಇದುವರೆಗೂ ಚಿತ್ರರಂಗಕ್ಕಷ್ಟೇ ಸೀಮಿತವಾಗಿದ್ದ ಈ ಚಟ ಇದೀಗ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಖ್ಯಾತ ಹೀರೋಯಿನ್, ಹೀರೋಗಳ ಫೋಟೋ ಹಾಕಿಕೊಂಡು ಅಶ್ಲೀಲ ಫೋಟೋ, ವಿಡಿಯೋ ಸೃಷ್ಟಿಸುತ್ತಿದ್ದ ಪುಂಡ ಪೋಕರಿಗಳು ಇದೀಗ ಡೀಪ್ ಫೇಕ್ ಫೋಟೋ, ವಿಡಿಯೋಗಳನ್ನು ಕ್ರೀಡಾ ಕ್ಷೇತ್ರದಲ್ಲೂ ಬಳಸುತ್ತಿರೋದು ದುರಂತವೇ ಸರಿ.