Home News Udupi: ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಪತಿ ಎರಡನೇ ಮದುವೆ, ದುಬೈಗೆ ಹಾರಿದ ಜೋಡಿ, ಮೊಬೈಲ್‌ನಲ್ಲೇ...

Udupi: ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಪತಿ ಎರಡನೇ ಮದುವೆ, ದುಬೈಗೆ ಹಾರಿದ ಜೋಡಿ, ಮೊಬೈಲ್‌ನಲ್ಲೇ ತಲಾಖೆ ನೀಡಿದ ವ್ಯಕ್ತಿ, ಮಹಿಳೆಯಿಂದ ದೂರು ದಾಖಲು

Triple Talaq

Hindu neighbor gifts plot of land

Hindu neighbour gifts land to Muslim journalist

Udupi: ಉಡುಪಿ: ಎರಡನೇ ಮದುವೆಯಾಗಿ ದುಬೈಗೆ ಹೋಗಿದ್ದ ಪತಿಗೆ ಮೊದಲನೇ ಪತ್ನಿ ಕರೆ ಮಾಡಿದ್ದು, ವಿಚಾರಣೆ ಮಾಡಿದಾಗ ಮೂರು ಬಾರಿ ತಲಾಖ್‌ ಎಂದು ಮೊಬೈಲ್‌ನಲ್ಲೇ ಹೇಳಿದ್ದು, ಉಡುಪಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಅಮ್ರಿನ್‌ ಮಂಗಳೂರು ನಿವಾಸಿಯನ್ನು ಉಡುಪಿಯ ಆದಿಲ್‌ ಇಬ್ರಾಹಿಂ ಎಂಬಾತ 2013 ರಲ್ಲಿ ಇಸ್ಲಾಂ ಷರಿಯತ್‌ ಪ್ರಕಾರ ಮಂಗಳೂರಿನ ಬೋಳಾರದ ಶಾದಿ ಮಹಲ್‌ನಲ್ಲಿ ಮದುವೆಯಾಗಿದ್ದರು. ಆಗ 60 ಪವನ್‌ ಚಿನ್ನಾಭರಣ, ಗೃಹಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತು. ಉಡುಗೊರೆ ರೂಪದಲ್ಲಿ 10 ಪವನ್‌ ಚಿನ್ನ, ಮದುವೆ ವೆಚ್ಚ 8 ಲಕ್ಷ ರೂ ಗಳನ್ನು ವಧುವಿನ ತಂದೆ ನೀಡಿದ್ದರು.

 

ಅನಂತರ ಸಾಲ ತೀರಿಸಲು ಬಂಗಾರ ಕೇಳಿದ್ದು, ನಂಬಿದ ಅಮ್ರಿನ್‌ 10 ಪವನ್‌ ಚಿನ್ನ ನೀಡಿದ್ದರು. ಮತ್ತೆ ಎರಡು ತಿಂಗಳಲ್ಲಿ 10 ಪವನ್‌ ನೆಕ್ಲೆಸ್‌ ಅಡವಿಟ್ಟು ಹಣ ಪಡೆದಿದರು. ನಂತರ ಮೋಸದಿಂದ 40 ಗ್ರಾಂ ಚಿನ್ನ, 2.50 ಲಕ್ಷ ರೂ ಪಡೆದು ವಾಪಾಸು ಕೊಟ್ಟಿಲ್ಲ. ಎಂಟು ತಿಂಗಳ ನಂತರ ಪತಿ ಆದಿಲ್‌ ಚಿನ್ನಾಭರಣ ಮಾರಿ ಅಮ್ರಿನ್‌ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿರಿಸಿ ಬ್ರಹ್ಮಾವರ ಮೀನಾ ಅನ್‌ಮೋಲ್‌ನಲ್ಲಿ ಮನೆ ಖರೀದಿ ಮಾಡಿದರು.

 

ನಂತರ ಮತ್ತೆ 8 ಲಕ್ಷ ರೂ. ಪಡೆದಿದ್ದರು. ಇದರ ಜೊತೆಗೆ ಅಮ್ರಿನ್‌ ಗಮನಕ್ಕೆ ಬಾರದ ಹಾಗೆ 2025 ಜ.3 ರಂದ ಎರಡನೇ ಮದುವೆಯಾದ ಆದಿಲ್‌, ಜ.4 ರಂದು ಎರಡನೇ ಪತ್ನಿ ಜೊತೆಗೆ ದುಬೈಗೆ ತೆರಳಿದ್ದ. ಇದನ್ನು ಅರಿತ ಪತ್ನಿ ಪತಿಗೆ ಕರೆ ಮಾಡಿದಾಗ ನಾನು ಎರಡನೇ ಮದುವೆಯಾಗಿದ್ದು, ತಲಾಖ್‌ ನೀಡುವುದಾಗಿ ಮೂರು ಬಾರಿ ತಲಾಖ್‌ ಎಂದು ಹೇಳಿದ್ದಾಗಿ ಮಹಿಳಾ ಪೊಲೀಸ್‌ ಠಾಣೆಗೆ ದೂರನ್ನು ಅಮ್ರಿನ್‌ ನೀಡಿರುವುದಾಗಿ ವರದಿಯಾಗಿದೆ.