Home News ಗಂಡನೊಂದಿದೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಯುವತಿಗೆ ಹೆಂಡತಿಯಿಂದ ಹಲ್ಲೆ!! ಖಾಸಗಿ ಅಂಗಕ್ಕೆ ಖಾರದಪುಡಿ ಎರಚಿ ಹಿಂಸೆ-ಯುವತಿಯ...

ಗಂಡನೊಂದಿದೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಯುವತಿಗೆ ಹೆಂಡತಿಯಿಂದ ಹಲ್ಲೆ!! ಖಾಸಗಿ ಅಂಗಕ್ಕೆ ಖಾರದಪುಡಿ ಎರಚಿ ಹಿಂಸೆ-ಯುವತಿಯ ಸ್ಥಿತಿ ಗಂಭೀರ

Hindu neighbor gifts plot of land

Hindu neighbour gifts land to Muslim journalist

ಗಂಡ ಹೆಂಡಿರ ಸಂಬಂಧದ ಮಧ್ಯೆ ಪರ ಪುರುಷ/ಮಹಿಳೆ ಎಂಟ್ರಿ ಕೊಟ್ಟರೆ ಆ ಸಂಬಂಧವೇ ಮುರಿದುಬೀಳುವ ಹಂತಕ್ಕೆ ತಲುಪುವುದು ಪ್ರಚಲಿತ ದಲ್ಲಿರುವ ಸಂಗತಿ.ಆ ಕ್ಷಣದಲ್ಲಿ ಬರುವ ಕೋಪ ಮೃದು ಮನಸ್ಸಿನವರನ್ನೂ ಕ್ರೂರಿಯನ್ನಾಗಿಸುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನ.

ಇಲ್ಲಿ ನಡೆದದ್ದೂ ಅದೇ. ಸುಂದರವಾಗಿದ್ದ ಸಂಸಾರವೊಂದಕ್ಕೆ ಪರ ಮಹಿಳೆಯೊಬ್ಬಳು ಪ್ರವೇಶಿಸಿದ್ದು, ಅಷ್ಟು ಮಾತ್ರವಲ್ಲದೆ ಹೆಂಡತಿಯ ಕೋಪದ ಕೈಗೆ ಸಿಕ್ಕು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ತನ್ನ ಗಂಡನೊಂದಿಗೆ ಯುವತಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆ ಅನುಮಾನ ನಿಜವಾಗಿತ್ತು. ಇಷ್ಟು ತಿಳಿಯುತ್ತಲೇ ಮಹಿಳೆಯ ಕೋಪ ನೆತ್ತಿಗೇರಿದ್ದು ಯುವತಿಗೆ ಸರಿಯಾಗಿ ಪಾಠ ಕಲಿಸುವ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಲಾಗಿದೆ.

ಇತ್ತ ಆಸ್ಪತ್ರೆಗೆ ದಾಖಲಾದ ಯುವತಿಯು ಪೊಲೀಸರ ಮೊರೆ ಹೋಗಿದ್ದು, ತನ್ನ ಪ್ರಿಯಕರನ ಹೆಂಡತಿ ಹಾಗೂ ಆಕೆಯ ಕಡೆಯವರು ಹಲ್ಲೆ ನಡೆಸಿದಲ್ಲದೆ ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ಕ್ರೂರತ್ವ ಎಸಗಿದ್ದಾರೆ ಎಂದು ತಿಳಿಸಿದ್ದಾಳೆ. ಸದ್ಯ ಯುವತಿಯ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ.