Home News Gas cylinder: ಸಿಲಿಂಡರ್‌ನಲ್ಲಿ ಗ್ಯಾಸ್ ಇನ್ನೆಷ್ಟು ಉಳಿದಿದೆ ಅಂತಾ ಸುಲಭವಾಗಿ ತಿಳಿಯಲು...

Gas cylinder: ಸಿಲಿಂಡರ್‌ನಲ್ಲಿ ಗ್ಯಾಸ್ ಇನ್ನೆಷ್ಟು ಉಳಿದಿದೆ ಅಂತಾ ಸುಲಭವಾಗಿ ತಿಳಿಯಲು ಈ ಟ್ರಿಕ್ಸ್ ಬಳಸಿ!

Hindu neighbor gifts plot of land

Hindu neighbour gifts land to Muslim journalist

Gas cylinder: ದಿನ ನಿತ್ಯ ಬಳಕೆಯಲ್ಲಿ ನಮಗೆ ಹೆಚ್ಚು ಅಗತ್ಯವಾಗಿರುವುದು ಗ್ಯಾಸ್. ಹೀಗಿರುವಾಗ ಮನೆಯ ಸಿಲಿಂಡರ್‌ನಲ್ಲಿ ಗ್ಯಾಸ್ (Gas cylinder) ಇಲ್ಲವಾದರೆ ಉಪವಾಸ ಗ್ಯಾರಂಟಿ. ಯಾಕೆಂದರೆ ಅಗತ್ಯವಿರುವ ಕ್ಷಣದಲ್ಲಿಯೇ ಅನೇಕ ಬಾರಿ ಗ್ಯಾಸ್ ಖಾಲಿಯಾಗುತ್ತವೆ. ಆದ್ದರಿಂದ ಸಿಲಿಂಡರ್ ನಲ್ಲಿ ಇನ್ನೆಷ್ಟು ಗ್ಯಾಸ್‌ ಉಳಿದಿದೆ ಎಂದು ಸುಲಭವಾಗಿ ಪತ್ತೆಹಚ್ಚುವ ಕೆಲ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.

ನೀವು ಗ್ಯಾಸ್‌ ಜ್ವಾಲೆಯ ಬಣ್ಣವು ನೀಲಿ ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾದಾಗ, ಸಿಲಿಂಡರ್ನಲ್ಲಿನ ಅನಿಲವು ಖಾಲಿಯಾಗುತ್ತಾ ಬರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಇನ್ನು ಕೆಲವರು ಸಿಲಿಂಡರ್ ಅನ್ನು ಎತ್ತಿ ಅದರ ತೂಕವನ್ನು ಅಳೆಯುವ ಮೂಲಕ ಸಿಲಿಂಡರ್ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ಕೆಲವರು ಅಂದಾಜು ಮಾಡುತ್ತಾರೆ.

ಇವೆಲ್ಲದರ ಹೊಸ ವಿಧಾನ ಇಲ್ಲಿದೆ. ಹೌದು, ನೀವು ಒದ್ದೆಯಾದ ಬಟ್ಟೆಯ ಸಹಾಯದಿಂದ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ಕಂಡುಹಿಡಿಯಬಹುದು. ಇದಕ್ಕಾಗಿ, ಮೊದಲು ಗ್ಯಾಸ್ ಸಿಲಿಂಡರ್ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಕಟ್ಟಬೇಕು. ಸುಮಾರು 1 ನಿಮಿಷದ ನಂತರ, ಈ ಬಟ್ಟೆಯನ್ನು ತೆಗೆಯಬೇಕು. ಈಗ ಸಿಲಿಂಡರ್‌ನ ಕೆಲವು ಭಾಗವು ಒಣಗಿಹೋಗಿರುವುದನ್ನು ಕಾಣಬಹುದು, ಇನ್ನೂ ಕೊಂಚ ಭಾಗ ತೇವವಾಗಿರುತ್ತದೆ. ಅಂದರೆ ಸಿಲಿಂಡರ್ನ ಖಾಲಿ ಭಾಗದಲ್ಲಿ ನೀರು ಬೇಗನೆ ಆರಿ ಹೋಗುತ್ತೆ. ಅಂತೆಯೇ ಗ್ಯಾಸ್‌ ಇರುವ ಜಾಗ ತಂಪಾಗಿರುತ್ತದೆ. ಅದಕ್ಕಾಗಿಯೇ ಆ ಸ್ಥಳದಲ್ಲಿ ನೀರು ಒಣಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.