Home News PAN Card: ಪಾನ್ ಕಾರ್ಡ್ ಕಳೆದೋದ್ರೆ ಟೆನ್ಶನ್ ಬೇಡ – ನಿಮಿಷದೊಳಗೆ ಆನ್ಲೈನ್ ನಲ್ಲಿ...

PAN Card: ಪಾನ್ ಕಾರ್ಡ್ ಕಳೆದೋದ್ರೆ ಟೆನ್ಶನ್ ಬೇಡ – ನಿಮಿಷದೊಳಗೆ ಆನ್ಲೈನ್ ನಲ್ಲಿ ಹೀಗೆ ಪಡೆಯಿರಿ

PAN Card

Hindu neighbor gifts plot of land

Hindu neighbour gifts land to Muslim journalist

PAN Card: ಪ್ಯಾನ್ ಕಾರ್ಡ್(PAN Card)ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಪ್ರಮುಖ ದಾಖಲೆಯಾಗಿದೆ.ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ (ITR)ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತೆರಿಗೆ ಪಾವತಿ ಮಾಡುವವರಿಗೆ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದ್ದು, ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಸಂದರ್ಭ ತೊಡಕು ಉಂಟಾಗುವುದು ನಿಶ್ಚಿತ. ಒಂದು ವೇಳೆ ಪ್ಯಾನ್ ಕಾರ್ಡ್ ಹಾಳಾದರೆ ಮರಳಿ ಹೇಗೆ ಪಡೆಯಬಹುದು ಗೊತ್ತಾ??

ಪ್ಯಾನ್ ಕಾರ್ಡ್ ಹಾಳಾದರೆ, ಕೆಲವೇ ನಿಮಿಷಗಳಲ್ಲಿ ಆನ್ಲೈನ್(Online)ಮೂಲಕ ನಿಗದಿತ ಶುಲ್ಕ ಪಾವತಿಸಿ ಮತ್ತೆ ಪಡೆಯಲು ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಸುಲಭ ಹಂತಗಳನ್ನು ಅನುಸರಿಸಬಹುದು. ಆದಾಯ ತೆರಿಗೆ ಇಲಾಖೆಯು UTIITSL ಅಥವಾ NSDL-TIN ಮೂಲಕ ಪ್ಯಾನ್ ಕಾರ್ಡ್ ನೀಡುತ್ತದೆ. ನಿಮ್ಮ PAN ಕಾರ್ಡ್ ಅನ್ನು ಯಾವ ಏಜೆನ್ಸಿ ನೀಡಿದೆ ಎಂಬುದನ್ನು ಆಧರಿಸಿ ನಿಮ್ಮ ಡಾಕ್ಯುಮೆಂಟ್ ಅನ್ನು ಮರುಮುದ್ರಣವನ್ನು ಪಡೆಯಲು ಸಂಪರ್ಕ ಮಾಡಬಹುದು.

ನಿಮ್ಮ ಪ್ಯಾನ್ ಕಾರ್ಡ್ ಕಳ್ಳತನವಾಗಿದ್ದರೆ ಇಲ್ಲವೇ ನಿಮ್ಮಿಂದ ಕಳೆದು ಹೋದರೆ, ಮೊದಲು ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಬೇಕು. ಈ ಎಫ್ಐಆರ್ ಪ್ರತಿಯನ್ನು ನಕಲಿ ಪ್ಯಾನ್ ಕಾರ್ಡ್ ಅರ್ಜಿಯ ದಾಖಲೆಗಳ ಜೊತೆಗೆ ರವಾನೆ ಮಾಡಬೇಕಾಗುತ್ತದೆ. ನೀವು ನೋಂದಾಯಿತ ಪೋಸ್ಟ್ ಮೂಲಕ ಪ್ಯಾನ್ ಅರ್ಜಿಯ ಸ್ವೀಕೃತಿಯನ್ನು ಕಳುಹಿಸುವ ಸಂದರ್ಭ ನಿಮ್ಮ ಅಪ್ಲಿಕೇಶನ್ ನಂಬರ್ ಜೊತೆಗೆ ಮರುಮುದ್ರಣಕ್ಕಾಗಿ ಅರ್ಜಿ ನಮೂದಿಸಬೇಕಾಗುತ್ತದೆ.

PAN Card ರೀಪ್ರಿಂಟ್ ಪಡೆಯುವುದು ಹೇಗೆ?
# ನೀವು ಗೂಗಲ್ ಗೆ ಹೋಗಿ Reprint Pan Card ಎಂದು ಸರ್ಚ್ ಮಾಡಬೇಕು.
# ಇದಾದ ಬಳಿಕ, NSDL ಅಧಿಕೃತ ವೆಬ್ಸೈಟ್ ಲಿಂಕ್ ಕಾಣಲಿದ್ದು, ಇದನ್ನು ಕ್ಲಿಕ್ ಮಾಡಿ ಪ್ಯಾನ್ ಕಾರ್ಡ್ ರೀಪ್ರಿಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
# ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಗಳ ಜೊತೆಗೆ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಬೇಕು.
# ಇದರ ನಂತರ ನಿಯಮಗಳು ಮತ್ತು ಷರತ್ತುಗಳನ್ನು ಅಗ್ರೀ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದಾಗ ನಿಮ್ಮ ಪ್ಯಾನ್ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲಿಸುವ ಪುಟ ತೆರೆಯಲಿದ್ದು, ಅದನ್ನು ಪರಿಶೀಲಿಸಿ.
# ಇದಾದ ಬಳಿಕ, ನೀವು OTP ಪಡೆಯಲು ಇರುವ ಬಟನ್ ಕ್ಲಿಕ್ ಮಾಡಿ.
# ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ನಮೂದಿಸಿಕೊಳ್ಳಿ.
# ಇದನ್ನು ವ್ಯಾಲಿಡೇಶನ್ ಮಾಡಬೇಕಾಗಿದ್ದು, ನೀವು ಪ್ಯಾನ್ ಕಾರ್ಡ್ ಪಡೆಯಲು 50 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ.

 

ಇದನ್ನು ಓದಿ: Cardamom Benefits: ಪುರುಷರೇ ಮನೆಯಲ್ಲಿಯೇ ಸಿಗೋ ಈ ಮಸಾಲೆ ಪದಾರ್ಥ ಸೇವಿಸಿ- ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ