Home News BBK-12 : ರನ್ನರಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಹಣವೆಷ್ಟು?

BBK-12 : ರನ್ನರಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಹಣವೆಷ್ಟು?

Hindu neighbor gifts plot of land

Hindu neighbour gifts land to Muslim journalist

BBK-12 : ಕನ್ನಡ ಕಿರುತೆರೆಯಲ್ಲಿ ಅತಿ ಜನಪ್ರಿಯ ಹಾಗೂ ಅತಿ ದೊಡ್ಡ ಶೋ ಎನಿಸಿಕೊಂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡಿದೆ. ಎಲ್ಲರೂ ನಿರೀಕ್ಷೆ ಮಾಡಿದಂತೆ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನೇರ ನಡೆನುಡಿಯ ನಿಷ್ಕಲ್ಮಶ ಮನಸ್ಸಿನ ರಕ್ಷಿತಾ ಶೆಟ್ಟಿ , ರನ್ನರ್ ಆಗಿದ್ದಾರೆ. ಮೊದಲೇ ಮಾಹಿತಿ ನೀಡಿದ್ದಂತೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ 50 ಲಕ್ಷ ರೂಪಾಯಿ ಭರ್ಜರಿ ಬಹುಮಾನ ದೊರೆತಿದೆ. ಹಾಗಿದ್ದರೆ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿಗೆ ಎಷ್ಟು ಹಣ ಸಿಕ್ಕಿದೆ ಎಂಬುದು ಹಲವರಿಗೆ ಕುತೂಹಲ ಕೆರಳಿಸಿದೆ. ಹಾಗಿದ್ದರೆ ರಕ್ಷಿತಾಳಿಗೆ ಸಿಕ್ಕ ಹಣವೆಷ್ಟು ಗೊತ್ತಾ? ನೋಡೋಣ ಬನ್ನಿ.

ಬಿಗ್​​ಬಾಸ್​​ನಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ಹಣ ನೀಡುವುದು ವಾಡಿಕೆ. ಅದರ ಜೊತೆಗೆ ಕಳೆದ ಕೆಲ ಸೀಸನ್​​ಗಳಿಂದ ಗೆದ್ದವರಿಗೆ ಕಾರೊಂದನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಆದರೆ ರನ್ನರ್ ಅಪ್ ಆದವರಿಗೆ ಏನೂ ಸಿಗುತ್ತಿರಲಿಲ್ಲ. ಇದರ ಬಗ್ಗೆ ಹಿಂದೆ ಕೆಲವು ಬಾರಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರನ್ನರ್ ಅಪ್​​ ಆದವರಿಗೂ ನಗದು ಬಹುಮಾನ ನೀಡಲಾರಂಭಿಸಿದರು.

ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು. ಬಹಳ ಕಷ್ಟಪಟ್ಟು ಆಡಿದ ರಕ್ಷಿತಾಗೆ ಒಳ್ಳೆಯ ಮೊತ್ತವನ್ನೇ ಬಹುಮಾನವಾಗಿ ನೀಡಲಾಯ್ತು