Home News Chaitra Kundapura : ವೇದಿಕೆಗಳಲ್ಲಿ ಭಾಷಣ ಮಾಡಲು ಚೈತ್ರ ಕುಂದಾಪುರ ಪಡೆಯುವ ಸಂಭಾವನೆ ಎಷ್ಟು? ನಿಜಾಂಶ...

Chaitra Kundapura : ವೇದಿಕೆಗಳಲ್ಲಿ ಭಾಷಣ ಮಾಡಲು ಚೈತ್ರ ಕುಂದಾಪುರ ಪಡೆಯುವ ಸಂಭಾವನೆ ಎಷ್ಟು? ನಿಜಾಂಶ ಗೊತ್ತಾದ್ರೆ ಅಚ್ಚರಿ ಪಡ್ತೀರಿ..!!

Hindu neighbor gifts plot of land

Hindu neighbour gifts land to Muslim journalist

Chaitra Kundapura : ಮಾತಿನ ಮಲ್ಲಿ, ಹಿಂದೂ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮನೆಯೊಳಗೆ ತಮ್ಮ ಮಾತಿನ ದಾಟಿಯಿಂದಲೇ, ಕಿರಿಚಾಟಗಳಿಂದಲೇ ಫೇಮಸ್ ಆಗಿದ್ದ ಚೈತ್ರ ಇದೀಗ ಹಲವರ ಫೇವರೆಟ್ ಆಗಿದ್ದಾರೆ. ಅಂದ ಹಾಗೆ ಚೈತ್ರ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಿದ್ದಂತೆ ಅವರ ಕುರಿತು ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳು ಹೊರ ಬಿದ್ದಿವೆ.

ಹೌದು, ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ವಯಸ್ಸು ಎಷ್ಟು? ಅವರು ಓದಿರುವುದು ಏನು? ಅವರು ಮಾಡುತ್ತಿದ್ದ ಕೆಲಸವೇನು? ಎಂಬ ವಿಚಾರಗಳ ಕುರಿತು ಚರ್ಚೆಯಾಗುತ್ತಿದೆ. ಇನ್ನೂ ಎಲ್ಲರಿಗೂ ತಿಳಿದಿರುವಂತೆ ಚೈತ್ರ ಅವರನ್ನು ಹಿಂದೂ ಫೈರ್ ಬ್ರಾಂಡ್ ಎಂದು ಕರೆಯುತ್ತಾರೆ. ಅವರು ಹಿಂದೂ ಸಮುದಾಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೈ ನವಿರೇಳಿ ಸುವಂತಹ ಭಾಷಣಗಳನ್ನು ನೀಡುತ್ತಾರೆ. ಅವರ ಮಾತುಗಳನ್ನು ಕೇಳಲು ಅನೇಕರು ಕಾದು ಕುಳಿತಿರುತ್ತಾರೆ.

ಯಸ್, ಹಿಂದುತ್ವದ ಬಗ್ಗೆ ಅಪಾರ ಜ್ಞಾನವುಳ್ಳ ಚೈತ್ರಾ ಕುಂದಾಪುರ, ತಮ್ಮ ಭಾಷಣಗಳಿಂದಲೇ ಜನರ ಗಮನ ಸೆಳೆದಿದ್ದರು. ಹಾಗಿದ್ದರೆ ಚೈತ್ರ ಅವರು ಈ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದೇ ಹಲವರ ಪ್ರಶ್ನೆ. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು ಅದನ್ನು ಕೇಳಿದರೆ ನೀವು ಅಚ್ಚರಿಪಡ್ತೀರಾ. ಯಾಕೆಂದರೆ ಚೈತ್ರ ಅವರು ಭಾಷಣ ಮಾಡಲು ಯಾವುದೇ ರೀತಿಯ ಸಂಭಾವನೆ ಪಡೆಯುವುದಿಲ್ಲ. ಯಾವ ಕಾರ್ಯಕ್ರಮಗಳಿಗೆ ಹೋದರು ಕೂಡ ಅವರು ಹಿಂದೂ ಎಂಬ ಅಭಿಮಾನದಿಂದ ಮಾತನಾಡಿ ಬರುತ್ತಾರೆ. ಹಿಂದುತ್ವದ ಉಳಿವಿಗಾಗಿ ತಮ್ಮನ್ನು ಮುಡಿಪಾಗಿಟ್ಟಿರುವ ಅವರು ಯಾವ ಸಭೆ ಸಮಾರಂಭಗಳಿಗೂ ಹೋದರು ಸಂಭಾವನೆ ಪಡೆಯುವುದಿಲ್ಲ ಎಂಬುದೇ ಅಚ್ಚರಿ ವಿಚಾರ.