Home latest ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ| ಭಾರೀ ಜೀವ ಹಾನಿ

ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ| ಭಾರೀ ಜೀವ ಹಾನಿ

Hindu neighbor gifts plot of land

Hindu neighbour gifts land to Muslim journalist

ಮಂಗಳವಾರ ರಾತ್ರಿಯಿಂದ ರಾಜಧಾನಿ ಶಿಮ್ಲಾ
ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿರುವ ಪರಿಣಾಮ, ಧರ್ಮಶಾಲಾ, ಶಿಮ್ಲಾ ಬಿಲಾಸ್‌ಪುರ, ಕುಫ್ರಿಯಲ್ಲಿ ಭಾರಿ ಮಳೆ ದಾಖಲಾಗಿದೆ ಎಂದು ವರದಿಯಾಗಿದೆ.

ಹಿಮಾಚಲ ಪ್ರದೇಶದ ಕುಲು ಪ್ರದೇಶದ ಚೋಜ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಮೇಘಸ್ಫೋಟ ಸಂಭವಿಸಿದ್ದು ವಿನಾಶ ಉಂಟು ಮಾಡಿದೆ. ಹೌದು, ಬುಧವಾರ ಮುಂಜಾನೆ ಪಾರ್ವತಿ ನದಿಯ ಉಪನದಿಯಾದ ಚೋಜ್ ಎಂಬಲ್ಲಿ ಸಂಭವಿಸಿರುವ ಮೇಘಸ್ಫೋಟದಲ್ಲಿ ಕ್ಯಾಪಿಂಗ್ ಸೈಟ್ ನಾಶವಾಗಿದ್ದು ಹಲವರು ನಾಪತ್ತೆ ಆಗಿದ್ದಾರೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹ ಉಂಟಾಗಿ ಹತ್ತಾರು ಮನೆಗಳನ್ನು ಮುಳುಗಿದೆ. ಈ ಭೀಕರ ಘಟನೆಯಲ್ಲಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆ. ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಕಣಿವೆಯಲ್ಲಿನ ಹಠಾತ್ ಪ್ರವಾಹದಿಂದಾಗಿ ಜೋಜ್ ಗ್ರಾಮಕ್ಕೆ ಹಾನಿಯಾಗಿದೆ. ಹೋಗುವ ಏಕೈಕ ಸೇತುವೆಯೂ ಹಾನಿಯಾಗಿದೆ.

ಇದಲ್ಲದೆ ಹಿಮಾಚಲ ಪ್ರದೇಶದಲ್ಲಿ ಎಡಬಿಡದೆ
ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಾರ್ವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೆ, ಝಖಾರಿ ಬಳಿ ಭೂಕುಸಿತದಿಂದಾಗಿ ಶಿಮಾ-ಕಿನ್ನರ್ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ. ಹವಾಮಾನ ಕೇಂದ್ರ ಶಿಮ್ಲಾದಲ್ಲಿ ಬುಧವಾರ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ.