Home News Karwara: ಕಾರವಾರ: ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ: ರಸ್ತೆ ಸಂಚಾರ ಬಂದ್ ‌

Karwara: ಕಾರವಾರ: ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ: ರಸ್ತೆ ಸಂಚಾರ ಬಂದ್ ‌

Hindu neighbor gifts plot of land

Hindu neighbour gifts land to Muslim journalist

Karwara: ಮಳೆ ಹೆಚ್ಚಾಗಿ ಬೀಸುತ್ತಿರುವ ಕಾರಣ ಕಾರವಾರ ತಾಲೂಕಿನ ಕದ್ರಾ ಬಳಿಯ ಬಾಳೆ ಮನೆ ಗ್ರಾಮದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಕದ್ರಾ ಭಾಗದ ಬಾಳೆಮನೆ, ಸುಳಗೇರಿ ಕೊಡಸಳ್ಳಿ ಸಂಪರ್ಕ ಕಡಿತಗೊಂಡಿದೆ. ಕದ್ರಾದಿಂದ ಕೊಡಸಳ್ಳಿ ಡ್ಯಾಮ್‌ ಸಂಪರ್ಕಿಸುವ ರಸ್ತೆ ಭೂಕುಸಿತವಾದ್ದರಿಂದ ಕೊಡಸಳ್ಳಿ ಜಲ ವಿದ್ಯುತ್‌ಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಸಿ ಸಿಬ್ಬಂದಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಗುಡ್ಡ ಕುಸಿತ ಆದ ಸಂದರ್ಭದಲ್ಲಿ ಯಾವ ಸಂಚಾರವೂ ಬೆಳಗ್ಗೆ ಆಗದೇ ಇರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದೇ ಹೇಳಬಹುದು. ದೊಡ್ಡ ಪ್ರಮಾಣದ ಭೂಕುಸಿತ ಉಂಟಾದರೆ ಕೊಡಸಳ್ಳಿ ಡ್ಯಾಮ್‌ಗೂ ತೊಂದರೆಯಾಗುವ ಎಚ್ಚರಿಕೆಯನ್ನು ನೀಡಲಾಗಿತ್ತು. ಸಂಜೆ ಒಳಗೆ ಸಂಚಾರ ವ್ಯವಸ್ಥೆ ಕಲ್ಪಿಸಿ ಮಾಡಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: KAS Officers Trasfer: 13 ಮಂದಿ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರಕಾರ