Home News Udupi: ಬ್ರಾಹ್ಮಣರಿಗೆ ಜನಿವಾರದಂತೆ ನಮಗೆ ಹಿಜಾಬ್: ಉಡುಪಿಯ ವಿದ್ಯಾರ್ಥಿನಿ ಹೇಳಿಕೆ ಯಶಪಾಲ್‌ ಸುವರ್ಣ ಆಕ್ಷೇಪ!

Udupi: ಬ್ರಾಹ್ಮಣರಿಗೆ ಜನಿವಾರದಂತೆ ನಮಗೆ ಹಿಜಾಬ್: ಉಡುಪಿಯ ವಿದ್ಯಾರ್ಥಿನಿ ಹೇಳಿಕೆ ಯಶಪಾಲ್‌ ಸುವರ್ಣ ಆಕ್ಷೇಪ!

Hindu neighbor gifts plot of land

Hindu neighbour gifts land to Muslim journalist

Udupi: ಈ ಹಿಂದೆ ಉಡುಪಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ವಿವಾದಕ್ಕೆ ಕಾರಣವಾಗಿದ್ದ ವಿದ್ಯಾರ್ಥಿನಿ ಹಿಜಾಬ್ ಅನ್ನು ಜನಿವಾರಕ್ಕೆ ಹೋಲಿಸಿ ಇನ್ನೊಮ್ಮೆ ವಿವಾದಕ್ಕೆ ಕಾರಣವಾಗಿದ್ದಾರೆ. ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಅವರು ವಿದ್ಯಾರ್ಥಿಗಳ ಹಿಜಾಬ್ ತೆಗಿಸಿದ ಮತ್ತು ಜನಿವಾರ ತೆಗೆಸಿದ ನೋವು ಒಂದೇ ಅಲ್ಲವೇ, ಬ್ರಾಹ್ಮಣರಿಗೆ ಜನಿವಾರ ಎಷ್ಟು ಅಗತ್ಯವೋ ನಮಗೂ ಹಿಜಾಬ್ ಅಷ್ಟೇ ಅಗತ್ಯ. ಜನಿವಾರ ತೆಗೆದ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಆದರೆ ಹಿಜಾಬ್‌ಗಳನ್ನು ತಡೆದ ಅಧಿಕಾರಿಗೆ ಯಾವ ಶಿಕ್ಷೆಯೂ ಆಗಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಘಟನೆಗೆ ಸಂಬಂಧಪಟ್ಟಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಿವಾರವನ್ನು ಹಿಜಾಬ್‌ಗೆ ಹೋಲಿಸುವುದು ದುಷ್ಟ ನೀತಿ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ ಎಂದಿದ್ದಾರೆ.