Home News ಹಿಜಾಬ್, ಬುರ್ಖಾ ಅಥವಾ ನಿಖಾಬ್ ಧರಿಸುವುದು ಪುರುಷರ ದಬ್ಬಾಳಿಕೆಯ ಸಂಕೇತ ಎಂದ ಬಾಂಗ್ಲಾದೇಶದ ವಿವಾದಿತ ಲೇಖಕಿ...

ಹಿಜಾಬ್, ಬುರ್ಖಾ ಅಥವಾ ನಿಖಾಬ್ ಧರಿಸುವುದು ಪುರುಷರ ದಬ್ಬಾಳಿಕೆಯ ಸಂಕೇತ ಎಂದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ !!

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ವಿವಾದ ಕರ್ನಾಟಕದಿಂದ ಪ್ರಾರಂಭವಾಗಿ ದೇಶ-ವಿದೇಶಗಳಿಗೂ ಹಬ್ಬಿದೆ. ಈ ಕುರಿತಂತೆ ಅನೇಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಹಿಜಾಬ್, ಬುರ್ಖಾ ಅಥವಾ ನಿಖಾಬ್ ಪುರುಷರ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶದ ಲೇಖಕಿ,
ಶಿಕ್ಷಣದ ಹಕ್ಕು ಧರ್ಮದ ಹಕ್ಕು ಎಂಬುದು ನಾನು ನಂಬುತ್ತೇನೆ. ಕೆಲವು ಮುಸ್ಲಿಮರು ಹಿಜಾಬ್ ಅತ್ಯಗತ್ಯ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಅದು ಅನಿವಾರ್ಯವಲ್ಲ ಎಂದು ಭಾವಿಸುತ್ತಾರೆ. ಆದರೆ 7ನೇ ಶತಮಾನದಲ್ಲಿ ಕೆಲವು ಸ್ತ್ರೀ ದ್ವೇಷವಾದಿಗಳು ಹಿಜಾಬ್ ಪರಿಚಯಿಸಿದರು. ಏಕೆಂದರೆ ಆ ಸಮಯದಲ್ಲಿ ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿತ್ತು ಎಂದಿದ್ದಾರೆ.

ಮಹಿಳೆಯರನ್ನು ನೋಡಿದರೆ ಪುರುಷರಿಗೆ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹಿಜಾಬ್ ಪರಿಚಯವಾಗಿತ್ತು. ಹೀಗಾಗಿ ಮಹಿಳೆಯರು ಹಿಜಾಬ್ ಅಥವಾ ಬುರ್ಖಾ ಧರಿಸಬೇಕಾಯಿತು ಹಾಗೂ ಪರುಷರಿಂದ ತಮ್ಮನ್ನು ಮರೆಮಾಡಿಕೊಳ್ಳಬೇಕಾಯಿತು ಎಂದು ತಿಳಿಸಿದರು.

ಇದು 21 ನೇ ಶತಮಾನ, ಆಧುನಿಕ ಸಮಾಜ. ಮಹಿಳೆಯರು ಪುರುಷರೊಂದಿಗೆ ಸಮಾನರು ಎಂಬುದನ್ನು ನಾವು ಕಲಿತಿದ್ದೇವೆ. ಆದ್ದರಿಂದ ಹಿಜಾಬ್, ನಿಖಾಬ್ ಅಥವಾ ಬುರ್ಖಾ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದು ತಸ್ಲೀಮಾ ಹೇಳಿದ್ದಾರೆ.