Home News Dakshina Kannada: ಮಂಗಳೂರಿನಲ್ಲಿ ಭಾರೀ ಕಟ್ಟೆಚ್ಚರ; ರಾತ್ರಿ 9.30ರೊಳಗೆ ಅಂಗಡಿ, ಹೋಟೆಲ್‌, ಮಳಿಗೆ ಬಾರ್‌ ಮುಚ್ಚಲು...

Dakshina Kannada: ಮಂಗಳೂರಿನಲ್ಲಿ ಭಾರೀ ಕಟ್ಟೆಚ್ಚರ; ರಾತ್ರಿ 9.30ರೊಳಗೆ ಅಂಗಡಿ, ಹೋಟೆಲ್‌, ಮಳಿಗೆ ಬಾರ್‌ ಮುಚ್ಚಲು ಆದೇಶ!

Karnataka
Image source: Deccan herald

Hindu neighbor gifts plot of land

Hindu neighbour gifts land to Muslim journalist

Dakshina Kannada: ಸುಹಾಸ್‌ ಶೆಟ್ಟಿ ಕೊಲೆಯ ಬಳಿಕ ಪ್ರತೀಕಾರದ ಹತ್ಯೆ ಕುರಿತು ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಪ್ರಕಟಸಿರುವ ಕಾರಣ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ʼರಾತ್ರಿ 9.30ಕ್ಕೆ ಭರತ್‌ ಕುಮ್ಡೇಲ್‌ ಕೊಲ್ಲುತ್ತೇವೆʼ ಎಂದು ಸಂದೇಶ ಬಂದಿರುವ ಕಾರಣ ಮಂಗಳೂರು ನಗರದಾದ್ಯಂತ ಪೊಲೀಸರು ಹೈ ಅಲರ್ಟ್‌ ಆಗಿದ್ದು, ಸೋಮವಾರ ರಾತ್ರಿ 9.30 ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲಾಗಿದೆ.

ಹೋಟೆಲ್‌, ಪಬ್‌, ಬಾರ್‌ಗಳು, ಫುಟ್‌ಪತ್‌ ವ್ಯಾಪಾರವನ್ನು ರಾತ್ರಿ 9.30 ರ ಒಳಗೆ ಬಂದ್‌ ಮಾಡಿಸಲಾಗುತ್ತಿದೆ. ಕೆಲವು ದಿನ ಇದು ಮುಂದುವರಿಯಲಿದೆ ಎನ್ನಲಾಗಿದೆ.

ರೌಡಿಶೀಟರ್‌ ಕೋಡಿಕೆರೆ ಲೋಕೇಶ್‌ ಹಾಗೂ ಗ್ಯಾಂಗ್‌ ಪ್ರತೀಕಾರಕ್ಕೆಯತ್ನ ನಡೆಸಿತ್ತು. ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್‌ ಎಂಬ ಮೀನಿನ ವ್ಯಾಪಾರಿಯನ್ನು ಅಟ್ಟಾಡಿಸಿ ಕೊಲೆಗೆ ಯತ್ನ ಮಾಡಿತ್ತು. ಇನ್ನೋವಾ ಕಾರಿನಲ್ಲಿ ಬಂದು ದಾಳಿ ಮಾಡಿತ್ತು. ಕಾವೂರು ಪೊಲೀಸರು ಲೋಕೇಶ್‌ನನ್ನು ಬಂಧನ ಮಾಡಿದ್ದಾರೆ.