Home News Prajwal Revanna: ಪ್ರಜ್ವಲ್‌, ರೇವಣ್ಣರನ್ನು ಬಂಧಿಸದೇ ಇರಲು ಕಾರಣವೇನು? ಗೃಹ ಸಚಿವರು ನೀಡಿದ ಕಾರಣ ಇಲ್ಲಿದೆ

Prajwal Revanna: ಪ್ರಜ್ವಲ್‌, ರೇವಣ್ಣರನ್ನು ಬಂಧಿಸದೇ ಇರಲು ಕಾರಣವೇನು? ಗೃಹ ಸಚಿವರು ನೀಡಿದ ಕಾರಣ ಇಲ್ಲಿದೆ

Prajwal Revanna

Hindu neighbor gifts plot of land

Hindu neighbour gifts land to Muslim journalist

Prajwal Revanna: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಹೆಚ್‌ ಡಿ ರೇವಣ್ಣರನ್ನು ಬಂಧಿಸದ ಕುರಿತು ಪ್ರಶ್ನೆಗೆ ಗೃಹ ಸಚಿವ ಜಿ ಪರಮೇಶ್ವರ್‌ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:  Plants Growth: ಗಿಡದ ಬೆಳವಣಿಗೆ ಇದ್ದಕ್ಕಿದ್ದಂತೆ ನಿಂತುಹೋಗಿದೆಯೇ? ಈ ವಿಧಾನಗಳನ್ನು ರೂಢಿಸಿ, ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ

” ಯಾರನ್ನೇ ಆದರೂ ಏಕಾಏಕಿ ಬಂಧನ ಮಾಡಲು ಸಾಧ್ಯವಿಲ್ಲ. ಪುರಾವೆ, ದೂರಿನಲ್ಲಿ ಏನು ಹೇಳಿದ್ದಾರೆ? ಯಾವ ಸೆಕ್ಷನ್‌ ಅಡಿಯಲ್ಲಿ ಈ ಪ್ರಕರಣ ಬರುತ್ತದೆ. ಬಂಧನ ಮಾಡಲು ಅವಕಾಶ ಇದೆಯೇ? ಜಾಮೀನು ಪಡೆಯುವ ಪ್ರಕರಣವೇ? ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ.

ಇದನ್ನೂ ಓದಿ:  Prajwal Revanna: ಪ್ರಜ್ವಲ್‌ ರೇವಣ್ಣ ಕರೆತರಲು ಕೇಂದ್ರದ ನೆರವು ಬೇಕು-ಗೃಹ ಸಚಿವ ಪರಮೇಶ್ವರ್‌

ಸಿಆರ್‌ಪಿಸಿ ಯ ಸೆಕ್ಷನ್‌ 41a ಅಡಿ ನೋಟಿಸ್‌ ನೀಡಲಾಗಿದೆ. ಆರೋಪಿಗಳು 24 ಗಂಟೆಯ ಒಳಗೆ ಬಂದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದೇ ಹೋದರೇ, ಎಸ್‌ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಸರಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತದ್ದೇನಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಇದರಲ್ಲಿ ಬಹಳ ಜನರ ಜೀವನದ ಪ್ರಶ್ನೆ ಇದೆ. ಇಷ್ಟ ಬಂದ ಹಾಗೇ ತನಿಖೆ ಮಾಡಲು ಸಾಧ್ಯವಿದಲ್ಲ. ಹಾಗಾಗಿಯೇ ಎಸ್‌ಐಟಿ ರಚನೆ ಮಾಡಿದ್ದೇವೆ ಎಂದು ಪರಮೇಶ್ವರ್‌ ಹೇಳಿದರು.